Back to Top

ಕೊಟ್ಟಿಯೂರ್ ಶಿವನ ದರ್ಶನ ಪಡೆದ ಕಾರುಣ್ಯ ರಾಮ್ – ‘ನಿಜಕ್ಕೂ ಡಿವೈನ್ ಫೀಲಿಂಗ್!’

SSTV Profile Logo SStv July 1, 2025
ಕೊಟ್ಟಿಯೂರ್ ಶಿವನ ದರ್ಶನ ಪಡೆದ ಕಾರುಣ್ಯ ರಾಮ್
ಕೊಟ್ಟಿಯೂರ್ ಶಿವನ ದರ್ಶನ ಪಡೆದ ಕಾರುಣ್ಯ ರಾಮ್

ಸ್ಯಾಂಡಲ್‌ವುಡ್‌ ನಟಿ ಕಾರುಣ್ಯ ರಾಮ್ ಇತ್ತೀಚೆಗೆ ತಮ್ಮ ಆತ್ಮೀಯ ಭಕ್ತಿಯಿಂದ ತುಂಬಿದ ಯಾತ್ರೆಯಲ್ಲಿ ಕೇರಳದ ಪ್ರಸಿದ್ಧ ಕೊಟ್ಟಿಯೋರ್ ಶಿವಮಂದಿರಕ್ಕೆ ಭೇಟಿ ನೀಡಿ ವಿಶೇಷ ಅನುಭವವನ್ನು ಪಡೆದಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಧನರಾಜ್ ಆಚಾರ್ಯ, ದರ್ಶನ್ ಮುಂತಾದವರು ಈಗಾಗಲೇ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈಗ ಕಾರುಣ್ಯ ರಾಮ್ ಕೂಡ ಈ ಪವಿತ್ರ ಕ್ಷೇತ್ರಕ್ಕೆ ಹೋಗಿದ್ದರೆ. ತಮ್ಮ ಬಾಲ್ಯದಿಂದಲೂ ದೇವಾಭಕ್ತಿಯಾಗಿರುವ ಕಾರುಣ್ಯ, ಈ ದರ್ಶನಕ್ಕೆ ಲಭ್ಯವಾದ ಅವಕಾಶವನ್ನು “ನಿಜಕ್ಕೂ ಅದೃಷ್ಟ” ಎಂದಿದ್ದಾರೆ.

ಕೊಟ್ಟಿಯೂರ್ ದೇವಸ್ಥಾನದ ವಿಶೇಷತೆ ಎಂತಂದರೆ ಇದು ಬಾವಲಿ ನದಿಯ ದಡದಲ್ಲಿ ಇದೆ ಮತ್ತು ದೇವಸ್ಥಾನ ಪ್ರವೇಶಿಸಲು ನದಿಯ ನೀರನ್ನೇ ದಾಟಬೇಕಾಗುತ್ತದೆ. ಈ ನೀರಿನಲ್ಲಿ ತಣ್ಣನೆಯ ಅನುಭವವಿಲ್ಲದೆ, ಬೆಚ್ಚಗಾದ ನೀರಿನಲ್ಲಿ ನಡೆದು ದೇವಾಲಯ ಪ್ರವೇಶಿಸುವ ಅನುಭವ ಒಂದು ವಿಭಿನ್ನ ಭಕ್ತಿಪಥವನ್ನು ಮೂಡಿಸುತ್ತದೆ.

ದರ್ಶನಕ್ಕೆ ಮುನ್ನ ಸುರಿಯುತ್ತಿದ್ದ ಮಳೆ, ಕಾರುಣ್ಯ ದೇವಾಲಯ ಪ್ರವೇಶಿಸಿದಾಗ ನಿಂತಿದ್ದು, ಅವರು “ಇದು ಶಿವನ ಅನುಗ್ರಹ” ಎಂದು ಹೇಳಿದರು. ಆ 28 ದಿನಗಳಲ್ಲಿಯೇ ಬಾಗಿಲು ತೆರೆಯುವ ಈ ದೇವಾಲಯಕ್ಕೆ ಈ ಬಾರಿ ಹೋಗಲು ಸಾಧ್ಯವಾದುದನ್ನೂ ಅವರು ತಮ್ಮ ಅದೃಷ್ಟವೆಂದು ಕರೆದಿದ್ದಾರೆ.

ಈ ಬಾರಿ ಲೇಡಿ ಪೊಲೀಸ್‌ರ ಸಹಾಯದಿಂದ ದೇವಾಲಯದ ಒಳಗೆ ಪ್ರವೇಶ ಸಾಧ್ಯವಾದರೂ, ಕಾರುಣ್ಯ ಅದನ್ನು ‘ನಿಜಕ್ಕೂ ಧನ್ಯತೆಯ ಅನುಭವ’ ಎಂದು ಶೇರ್ ಮಾಡಿದ್ದಾರೆ. ದೇವಸ್ಥಾನ ಸುತ್ತಲಿರುವ ಪರಿಸರ, ನದಿಯ ಶುದ್ಧ ವಾತಾವರಣ, ಭಕ್ತರ ಉತ್ಸಾಹ – ಇವೆಲ್ಲವೂ ಅವರನ್ನು ಆಧ್ಯಾತ್ಮದ ಲೋಕದಲ್ಲಿ ತೂಗಿದಂತಾಗಿದೆ.