Back to Top

ಕೊಲ್ಲೂರಿಗೆ ಬಂದ 'ಕಾಂತಾರ' ಡಿವೈನ್ ಸ್ಟಾರ್‌! ರಿಷಬ್-ಪ್ರಗತಿ ಶೆಟ್ಟಿ ಮನವೊಲಿಸಿದ ಮೂಕಾಂಬಿಕೆ ದರ್ಶನ

SSTV Profile Logo SStv July 15, 2025
ಕೊಲ್ಲೂರಿಗೆ ಬಂದ 'ಕಾಂತಾರ' ಡಿವೈನ್ ಸ್ಟಾರ್‌!
ಕೊಲ್ಲೂರಿಗೆ ಬಂದ 'ಕಾಂತಾರ' ಡಿವೈನ್ ಸ್ಟಾರ್‌!

'ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಜುಲೈ 14ರಂದು ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿದರು. ಧಾರ್ಮಿಕ ಆಚರಣೆಗಾಗಿ ಅವರು ಕುಟುಂಬ ಸಮೇತರಾಗಿ ಆಗಾಗ್ಗೆ ಕೊಲ್ಲೂರಿಗೆ ಭೇಟಿ ನೀಡುವ ಪರಿಪಾಠವಿದೆ. ಈ ಮೊದಲು ಜೂನಿಯರ್ ಎನ್ ಟಿಆರ್ ಹಾಗೂ ಪ್ರಶಾಂತ್ ನೀಲ್ ಜೊತೆಗೆ ಸಹ ಅವರು ಈ ದೇವಾಲಯಕ್ಕೆ ಆಗಮಿಸಿದ್ದನ್ನು ನೆನಪಿಸಬಹುದು.

ಈ ವೇಳೆ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಅಕ್ಟೋಬರ್ 2ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕರಾವಳಿಯಲ್ಲೇ ಶೂಟಿಂಗ್ ನಡೆದ ಹಿನ್ನೆಲೆಯಲ್ಲಿ, ರಿಷಬ್ ಶೆಟ್ಟಿ ದಂಪತಿ ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಕನ್ನಡದ ಜೊತೆಗೆ ತೆಲುಗು ಹಾಗೂ ಹಿಂದಿ ಚಿತ್ರರಂಗದಿಂದ ರಿಷಬ್ ಶೆಟ್ಟಿಗೆ ಭಾರೀ ಆಫರ್‌ಗಳು ಬರುತ್ತಿವೆ.