Back to Top

ಅಯ್ಯೋ ಅಮ್ಮ..! ಕಿವಿ ಚುಚ್ಚಿಸುವಾಗ ಕಿರುಚಿದ ಭವ್ಯಾ ಗೌಡ – ವಿಡಿಯೋ ವೈರಲ್

SSTV Profile Logo SStv July 7, 2025
ಕಿವಿ ಚುಚ್ಚಿಸಿಕೊಂಡ ಭವ್ಯಾ ಗೌಡ
ಕಿವಿ ಚುಚ್ಚಿಸಿಕೊಂಡ ಭವ್ಯಾ ಗೌಡ

ಬಿಗ್‌ಬಾಸ್ ಸೀಸನ್ 11 ಮೂಲಕ ಪ್ರಖ್ಯಾತಿಯಾದ ನಟಿ ಭವ್ಯಾ ಗೌಡ, ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಿವಿ ಚುಚ್ಚಿಸಿಕೊಂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸೀರಿಯಲ್ ಶೂಟಿಂಗ್ ಬ್ಯುಸಿಯ ನಡುವೆಯೂ ಅವರು ಈ ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ.

ಸಿಲ್ಕ್ ಸೀರೆ ಧರಿಸಿ ನಿಂತ ಭವ್ಯಾ, ಕಿವಿ ಚುಚ್ಚಿಸುವಾಗ "ಅಯ್ಯೋ ಅಮ್ಮ..!" ಎಂದು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದು, ವಿಡಿಯೋ ನೋಡಿ ನೆಟ್ಟಿಗರು ಫುಲ್ ಎಂಟರ್‌ಟೈನ್‌ ಆಗಿದ್ದಾರೆ. ಎರಡನೇ ಕಿವಿ ಚುಚ್ಚಿಸುವಾಗ ಸ್ವಲ್ಪ ತಡಕಾಡಿದರೂ, ಅವರ ಹೊಸ ಲುಕ್‌ನಲ್ಲಿ ಕ್ಯೂಟ್ ಅಪ್ಪಿಯರೆನಿಸಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು "ಅಕ್ಕ ಚೆನ್ನಾಗಿ ಕಾಣ್ತಾ ಇದ್ದೀರಾ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಕರ್ಣ’ ಸೀರಿಯಲ್‌ನಲ್ಲಿ ತೊಡಗಿರುವ ಭವ್ಯಾ, ಈ ಮೂಲಕ ತಮ್ಮ ವೀಕ್ಷಕರನ್ನು ಹೊಸ ಲುಕ್‌ನಿಂದ ಆಕರ್ಷಿಸುತ್ತಿದ್ದಾರೆ.