Back to Top

ಬಿಗ್ ಬಾಸ್ ಸೀಸನ್ 12: ಕಿಚ್ಚ ಸುದೀಪ್ ಮತ್ತೆ ಬಿಗ್ ಬಾಸ್ ಹೋಸ್ಟ್! ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್

SSTV Profile Logo SStv June 30, 2025
ಕಿಚ್ಚ ಸುದೀಪ್ ಮತ್ತೆ ಬಿಗ್ ಬಾಸ್ ಸೀಸನ್ 12 ಹೋಸ್ಟ್
ಕಿಚ್ಚ ಸುದೀಪ್ ಮತ್ತೆ ಬಿಗ್ ಬಾಸ್ ಸೀಸನ್ 12 ಹೋಸ್ಟ್

ಕನ್ನಡದ ಜನಪ್ರಿಯ ಮತ್ತು ಬೃಹತ್ ರಿಯಾಲಿಟಿ ಶೋ ಬಿಗ್ ಬಾಸ್, ತನ್ನ 12ನೇ ಸೀಸನ್ಗೆ ಸಜ್ಜಾಗಿದೆ. ಈಗಾಗಲೇ 11 ಯಶಸ್ವಿ ಸೀಸನ್‌ಗಳನ್ನು ಪೂರೈಸಿರುವ ಈ ಶೋ, ವೀಕ್ಷಕರಲ್ಲಿ ತೀವ್ರ ನಿರೀಕ್ಷೆ ಮೂಡಿಸಿದ್ದ ಅದು, ಇದೀಗ ಅದಕ್ಕೆ ಧೃಡತೆಯಾಗಿ ಮತ್ತೊಂದು ಕಾರಣ ನೀಡಿದೆ ಕಿಚ್ಚ ಸುದೀಪ್ ಮತ್ತೆ ನಿರೂಪಕ!

ಕಲರ್ಸ್ ಕನ್ನಡ ವಾಹಿನಿಯಿಂದ ಬೆಂಗಳೂರು ಎಂ.ಜಿ. ರಸ್ತೆ ತಾಜ್ ಹೋಟೆಲ್‌ನಲ್ಲಿ ನಡೆದ ಪ್ರೆಸ್ ಮೀಟ್ ವೇಳೆ, ಈ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಯಿತು. ಬಿಗ್ ಬಾಸ್ ಟೀಮ್ ನುಡಿದಂತೆ, ಕಿಚ್ಚ ಸುದೀಪ್ ಅವರೇ ಸೀಸನ್ 12ಕ್ಕೂ ಹೋಸ್ಟ್ ಆಗಲಿದ್ದಾರೆ, ಎಂದು ಸ್ಪಷ್ಟವಾಗಿ ತಿಳಿಸಿದೆ.

ಸೀಸನ್ 11 ಮುಕ್ತಾಯವಾಗಿ ಐದು ತಿಂಗಳು ಕಳೆದಿರುವಂತೆಯೇ, ವೀಕ್ಷಕರಲ್ಲಿ ಮುಂದಿನ ಸೀಸನ್ ಬಗ್ಗೆ ನಿರೀಕ್ಷೆಯು ಹೆಚ್ಚಾಗಿತ್ತು. ಇದೀಗ ಈ ಅಧಿಕೃತ ಘೋಷಣೆಯಿಂದ ಅಭಿಮಾನಿಗಳ ಸಂತೋಷಕ್ಕೆ ಪಾಠವೇ ಇಲ್ಲ!