ಕಿಚ್ಚ ಸುದೀಪ್ ಕೈಗೆ ಸರಿಯಾಗಿ ಸಿಕ್ಕಿಬಿದ್ದ ಚೈತ್ರಾ ಕುಂದಾಪುರ ವೇದಿಕೆ ಮೇಲೆ ಫುಲ್ ಶೇಪ್ ಔಟ್


ಕಿಚ್ಚ ಸುದೀಪ್ ಕೈಗೆ ಸರಿಯಾಗಿ ಸಿಕ್ಕಿಬಿದ್ದ ಚೈತ್ರಾ ಕುಂದಾಪುರ ವೇದಿಕೆ ಮೇಲೆ ಫುಲ್ ಶೇಪ್ ಔಟ್ ಬಿಗ್ಬಾಸ್ ಕನ್ನಡ ಸೀಸನ್ 11ನಲ್ಲಿ ಸ್ಪರ್ಧಿಯಾಗಿರುವ ಚೈತ್ರಾ ಕುಂದಾಪುರ ಅವರು ಕಿಚ್ಚ ಸುದೀಪ್ನ ಕಠಿಣ ಕ್ಲಾಸ್ಗೆ ಗುರಿಯಾಗಿದ್ದಾರೆ. ಹೊಸ ಪ್ರೋಮೋದಲ್ಲಿ ನಾಮಿನೇಷನ್ಗೆ ಸಂಬಂಧಿಸಿದಂತೆ ಸುದೀಪ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಅವಕಾಶ ನೀಡಿದರು. ಎಲ್ಲರೂ ಚೈತ್ರಾ ಹೆಸರು ಹೇಳಿದಾಗ, ಕೋಪಗೊಂಡ ಚೈತ್ರಾ ಕಣ್ಣೀರು ಹಾಕುತ್ತಾ ಮೂರು ಬಾರಿ ನಿರ್ವಹಣಾ ಉಸ್ತುವಾರಿಯನ್ನು ಅವರ ಮೇಲಿಟ್ಟು ಕುಗ್ಗಿಸಿರುವುದಾಗಿ ಬೇಸರ ವ್ಯಕ್ತಪಡಿಸಿದರು.
ಸುದೀಪ್, ಯಾರಿಂದ ನಿಮ್ಮ ಮೇಲೆ ದಬ್ಬಾಳಿಕೆ ಆಗಿದೆ ಎಂಬುದನ್ನು ನೇರವಾಗಿ ಕೇಳಿದರು. ಚೈತ್ರಾ, ಕೆಲವು ಜನ ತಮ್ಮ ಮೇಲಿನ ಅಭಿಪ್ರಾಯದಿಂದ ತಮಗೆ ಹಿನ್ನಡೆ ಉಂಟಾಗಿದ್ದು ಎಂದು ಹೇಳಿದರು. ಇದಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸುದೀಪ್, "ನೀವು ನಾಮಿನೇಷನ್ ತೆಗೆದುಕೊಳ್ಳಲು ರೆಡಿಯಾದ್ರೆ, ಬಾಣ ಬೀಳಿಸಲು ರೆಡಿಯಾಗಬೇಕು. ಇಲ್ಲ ಅಂದ್ರೆ, ನೀವು ಈ ಆಟಕ್ಕೆ ಫಿಟ್ ಅಲ್ಲ" ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಘಟನೆಯ ನಂತರ ಮನೆಯ ಸದಸ್ಯರು ಆಘಾತಕ್ಕೊಳಗಾದರು. ಈ ಕಿಚ್ಚನ ಪಂಚಾಯ್ತಿಯ ನಂತರ ಚೈತ್ರಾ ಕುಂದಾಪುರ ಮುಂದಿನ ಆಟದಲ್ಲಿ ತಾವು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
