Back to Top

"ಮದುವೆಯಾಗಿದ್ರೂ ತಾಳಿ ಹಾಕಿಲ್ಲ ಅನ್ನೋ ಪ್ರಶ್ನೆಗೆ?"; ಖಡಕ್ ಉತ್ತರ ನೀಡಿದ ನಟಿ ಅದಿತಿ ಪ್ರಭುದೇವ!

SSTV Profile Logo SStv June 27, 2025
ಖಡಕ್ ಉತ್ತರ ನೀಡಿದ ನಟಿ ಅದಿತಿ ಪ್ರಭುದೇವ!
ಖಡಕ್ ಉತ್ತರ ನೀಡಿದ ನಟಿ ಅದಿತಿ ಪ್ರಭುದೇವ!

ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್ & ಬೋಲ್ಡ್ ನಟಿ ಆಗಿ ಹೆಸರು ಮಾಡಿರುವ ಅದಿತಿ ಪ್ರಭುದೇವ ಇತ್ತೀಚೆಗೆ ಮತ್ತೆ ಸುದ್ದಿಗೆ ಕಾರಣರಾದರು. ಕಾರಣ ಮದುವೆಯಾದರೂ ತಾಳಿ ಹಾಕಿಲ್ಲ ಎನ್ನುವ ಕೆಲವರ ಕಾಮೆಂಟ್‌ಗಳಿಗೆ ಅವರು ನೀಡಿದ ಖಾರ ಉತ್ತರ.

ಇತ್ತೀಚೆಗೆ ಮಕ್ಕಳೊಂದಿಗೆ ನಡೆದ ಒಂದು ಸಮಾರಂಭದಲ್ಲಿ ಭಾಗವಹಿಸಿದ್ದ ಅದಿತಿ, "ನಾನು ಪ್ಯಾಂಟ್-ಶರ್ಟ್ ಹಾಕಿಕೊಂಡಿದ್ದೇನೆ, ಸೀರೆ ಹಾಕಿ ಬರಬೇಕಿತ್ತು ಅಂತ ಕೇಳುವವರು ಇವತ್ತೂ ಇದ್ದಾರೆ. ಮದುವೆಯಾಗಿದ್ರೂ ತಾಳಿ ಹಾಕಿಲ್ಲ ಅನ್ನೋ ಪ್ರಶ್ನೆಗಳೂ ಬರುತ್ತವೆ. ಆದರೆ ನಾವು ನಾವೇನು ದಬ್ಬಾಕುತ್ತಿದ್ದೇವೆ ಅನ್ನೋದು ಯೋಚನೆ ಮಾಡೋ ಸಮಯ ಬಂದಿದೆ," ಎಂದು ತಮ್ಮ ನೇರ ಮಾತುಗಳಲ್ಲಿ ಸ್ಪಷ್ಟಪಡಿಸಿದರು.

“ನಮಗೆ ದೇವರು ಕೊಟ್ಟಿರುವ ಈ ಜೀವನವನ್ನು, ಬೇರೆಯವರ ಆಕ್ಷನ್ ಅಥವಾ ಟೀಕೆಗೆ ವ್ಯರ್ಥ ಮಾಡೋದಕ್ಕೆ ಯಾಕೆ ಉಪಯೋಗಿಸಬೇಕು? ನಮ್ಮ ಕಾಲ, ನಮ್ಮ ಜೀವನ ನಮ್ಮದೇ ಆಗಿರಲಿ!” ಅದಿತಿ 2022ರಲ್ಲಿ ಉದ್ಯಮಿ ಯಶಸ್ ಪಟ್ಲ ಅವರನ್ನು ಮದುವೆಯಾಗಿದ್ದು, ದಂಪತಿಗೆ ನೇಸರ ಎಂಬ ಮುದ್ದಾದ ಮಗಳು ಇದ್ದಾಳೆ. ಮದುವೆಯ ನಂತರ ಸಿನಿಮಾಗಳಿಂದ ಸ್ವಲ್ಪ ದೂರವಿದ್ದರೂ, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಅದಿತಿ ಅಭಿನಯಿಸಿದ್ದ ಪ್ರಮುಖ ಚಿತ್ರಗಳು: ಬಜಾರ್, ಸಿಂಗ, ತೋತಾಪುರಿ, ರಂಗನಾಯಕಿ, ಅಂದೊಂದಿತ್ತು ಕಾಲ (ವಿನಯ್ ರಾಜ್‌ಕುಮಾರ್ ಜೊತೆಗೆ – ರಿಲೀಸ್ ಆಗಬೇಕಿದೆ), ಇಷ್ಟು ಮಾತುಗಳಿಂದ ಸ್ಪಷ್ಟವಾಗುವುದು ಏನೆಂದರೆ, ಅದಿತಿ ಪ್ರಭುದೇವ ತಮ್ಮ ಜೀವನವನ್ನು ತಮ್ಮ ಶರತ್ತುಗಳ ಮೇಲೆ ನಡೆಸುತ್ತಿರುವ ಅತ್ಯಂತ ಆತ್ಮವಿಶ್ವಾಸಿ ಕಲಾವಿದೆ.