Back to Top

ಫ್ಯಾಷನ್‌ ಐಕಾನ್ ಆಗಿ ಹೊರಹೊಮ್ಮಿದ ಮೇಘಾ ಶೆಟ್ಟಿ – ಹೊಸ ಸಿನಿಮಾಗಳಿಗೆ ಡಿಮ್ಯಾಂಡ್ ಹೆಚ್ಚಳ!

SSTV Profile Logo SStv August 5, 2025
ಹಾಟ್ ಲುಕ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ
ಹಾಟ್ ಲುಕ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ

‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಕಿರುತೆರೆಯಲ್ಲಿ ಭಾರೀ ಜನಪ್ರಿಯತೆ ಪಡೆದ ನಟಿ ಮೇಘಾ ಶೆಟ್ಟಿ ಇದೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಿವಿ ಪರದೆಯಿಂದ ದೂರವಿದ್ದರೂ, ತಮ್ಮ ವೈಭೋಗದ ಲುಕ್‌ಗಳಿಂದ ಮತ್ತು ಫೋಟೋಶೂಟ್‌ಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗಷ್ಟೆ ಇನ್‌ಸ್ಟಾಗ್ರಾಂನಲ್ಲಿ ಹಾಟ್ ಮತ್ತು ಸ್ಟೈಲಿಶ್ ಲುಕ್‌ನಲ್ಲಿ ಪೋಸ್ ನೀಡಿದ ಮೇಘಾ ಶೆಟ್ಟಿ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ನೋಡಿ ನೆಟ್ಟಿಗರು "ಅಂದದ ಅಪ್ಸರೆ", "ಸೂಪರ್ ಕ್ವೀನ್" ಎಂದು ಫುಲ್ ಕಾಮೆಂಟ್ ಮಾಡುತ್ತಿದ್ದಾರೆ.

ಮೇಘಾ, ಬೇರೆ ಭಾಷೆಗಳ ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಜೊತೆಗೆ, ಅವರ ನಿರ್ಮಾಣ ಸಂಸ್ಥೆ ಮುದ್ದುಸೊಸೆ ಎಂಬ ಹೊಸ ಸೀರಿಯಲ್‌ನ್ನೂ ಕಲರ್ಸ್ ಕನ್ನಡದಲ್ಲಿ ಆರಂಭಿಸಿದ್ದು, ವೀಕ್ಷಕರ ಮನ ಗೆದ್ದಿದೆ.