Back to Top

ಹೊಸ ಲುಕ್‌ನಲ್ಲಿ ಕಿರಾತಕ ನಟಿ ಓವಿಯಾ ಹೆಲೆನ್: ಸಾಮಾಜಿಕ ಜಾಲತಾಣದಲ್ಲಿ ವೈರಲ್

SSTV Profile Logo SStv August 5, 2025
ಹೊಸ ಲುಕ್‌ನಲ್ಲಿ ಕಿರಾತಕ ನಟಿ ಓವಿಯಾ ಹೆಲೆನ್
ಹೊಸ ಲುಕ್‌ನಲ್ಲಿ ಕಿರಾತಕ ನಟಿ ಓವಿಯಾ ಹೆಲೆನ್

ಕಿರಾತಕ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಓವಿಯಾ ಹೆಲೆನ್ ಇದೀಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡುದ್ದಾರೆ  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಯಶ್ ಜೊತೆಗೆ 2011ರಲ್ಲಿ "ಕಿರಾತಕ" ಚಿತ್ರದಲ್ಲಿ ನಟಿಸಿದ್ದ ಓವಿಯಾ, ಆಗಿನಿಂದಲೂ ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಫೋಟೋಗಳಲ್ಲಿ ಓವಿಯಾ ವಿಭಿನ್ನ ಶೈಲಿಯಲ್ಲಿ ಮೆರೆದಿದ್ದಾರೆ. ಒಂದು ಫೋಟೋದಲ್ಲಿ ಕೈಯಲ್ಲಿ ಗುಲಾಬಿ ಹಿಡಿದು ಮಾದಕ ಕತ್ತಲೆಯ ರಾಣಿಯಂತೆ ಪೋಸ್ ನೀಡಿದರೆ, ಮತ್ತೊಂದು ಫೋಟೋದಲ್ಲಿ ಬಿಳಿ ಗೌನ್‌ನಲ್ಲಿ ಮಿಂಚಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ಓವಿಯಾ, ತಮ್ಮ ಫ್ಯಾಷನ್‌ ಸ್ಟೈಲ್ ಮತ್ತು ನವೀನ ಲುಕ್‌ಗಳಿಂದ ಅಭಿಮಾನಿಗಳ ಮನಸೆಳೆದಿದ್ದಾರೆ.