Back to Top

ಥೈಲ್ಯಾಂಡ್‌ನಲ್ಲಿ ‘ಡೆವಿಲ್’ ಹಾಡಿನ ಚಿತ್ರೀಕರಣ ಆರಂಭ: ಹಸಿರು ಸೂಟ್‌ನಲ್ಲಿ ಮಿಂಚಿದ ದರ್ಶನ್

SSTV Profile Logo SStv July 17, 2025
ಹಸಿರು ಸೂಟ್‌ನಲ್ಲಿ ಮಿಂಚಿದ ದರ್ಶನ್
ಹಸಿರು ಸೂಟ್‌ನಲ್ಲಿ ಮಿಂಚಿದ ದರ್ಶನ್

ನಟ ದರ್ಶನ್, ತಮ್ಮ ಹೊಸ ಸಿನಿಮಾ ‘ಡೆವಿಲ್’ ಚಿತ್ರಕ್ಕಾಗಿ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ನಟಿ ರಚನಾ ರೈ ಜೊತೆಗಿನ ಡ್ಯೂಯೆಟ್ ಹಾಡಿನ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ದರ್ಶನ್ ಹಸಿರು ಬಣ್ಣದ ಶೈಲಿಶಾಲಿ ಸೂಟ್‌ನಲ್ಲಿ ಮಿಂಚುತ್ತಿರುವ ಫೋಟೋಗಳು ವೈರಲ್ ಆಗಿವೆ.

ಬ್ಯಾಂಕಾಕ್, ಫುಕೆಟ್ ಹಾಗೂ ಕ್ರಾಬಿ ಪ್ರದೇಶಗಳಲ್ಲಿ ನಾಲ್ಕು ಐದು ದಿನಗಳ ಕಾಲ ಈ ಹಾಡು ಚಿತ್ರೀಕರಣಗೊಳ್ಳಲಿದೆ. ನಂತರ ದರ್ಶನ್ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಮರಳಲಿದ್ದಾರೆ.

ಕೊಲೆ ಕೇಸ್‌ನಲ್ಲಿ ಬಂಧನದಲ್ಲಿದ್ದ ದರ್ಶನ್, ಇದೀಗ ವಿದೇಶ ಪ್ರವಾಸಕ್ಕೆ ತೆರಳಿರುವುದು ವಿಶೇಷ. ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್, ಜೊತೆಗೆ ಡೆವಿಲ್ ಟೀಮ್ ಈ ಪ್ರವಾಸದಲ್ಲಿ ದರ್ಶನ್ ಜೊತೆಯಲ್ಲಿದ್ದಾರೆ. ‘ಡೆವಿಲ್’ ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿದ ಬೆನ್ನಲ್ಲೇ ಈ ಗ್ಲಾಮರ್ ಸಾಂಗ್‌ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.