Back to Top

ಹನುಮಂತನ ಹೆಲಿಕಾಪ್ಟರ್ ಕಾಮಿಡಿ ಬಡಿದು ನಕ್ಕ ಸುದೀಪ್ ಮತ್ತು ಬಿಗ್ ಬಾಸ್ ಮನೆ ಮಂದಿ

SSTV Profile Logo SStv December 2, 2024
ಹನುಮಂತನ ಹೆಲಿಕಾಪ್ಟರ್ ಕಾಮಿಡಿ
ಹನುಮಂತನ ಹೆಲಿಕಾಪ್ಟರ್ ಕಾಮಿಡಿ
ಹನುಮಂತನ ಹೆಲಿಕಾಪ್ಟರ್ ಕಾಮಿಡಿ ಬಡಿದು ನಕ್ಕ ಸುದೀಪ್ ಮತ್ತು ಬಿಗ್ ಬಾಸ್ ಮನೆ ಮಂದಿ ‘ಬಿಗ್ ಬಾಸ್ ಕನ್ನಡ 11’ ನಲ್ಲಿ ಈ ವಾರದ ಹಾಸ್ಯಭರಿತ ಮಸಾಲೆ ಸೇರಿದ್ದು, ಹನುಮಂತನ ಮಾಸ್ಟರ್‌ ಕಾಮಿಡಿ. ಹೆಲಿಕಾಪ್ಟರ್ ಶಬ್ದವನ್ನು ಬಾಯಿಂದ ಮಾಡಬೇಕು ಎಂಬ ಗೇಮ್‌ನಲ್ಲಿ, ಹನುಮಂತನ ಪ್ರಯತ್ನ ಸುದೀಪ್ ಹಾಗೂ ಬಿಗ್ ಬಾಸ್ ಮನೆ ಮಂದಿಯನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದೆ. ಹನುಮಂತನ ಅಭಿನಯ ಮತ್ತು ಶಬ್ದ ಪ್ರಚಾರದ ಪರಿ, ಮೋಕ್ಷಿತಾಳನ್ನು ಕುತೂಹಲಕ್ಕೀಡಾಗಿಸಿದೆ. ಅಲ್ಲದೆ, ಟಾಸ್ಕ್​ನ ಎನರ್ಜಟಿಕ್ ಪರ್ಫಾರ್ಮೆನ್ಸ್‌ಗಾಗಿ ಸುದೀಪ್ ಅವರಿಂದ ಪ್ರಶಂಸೆ ಕೂಡ ಪಡೆದಿದ್ದಾರೆ. ಈ ಗೇಮ್‌ನಲ್ಲಿ ಗೌತಮಿ ಮತ್ತು ಮಂಜು ಮೊದಲ ಸುತ್ತಿನಲ್ಲಿ ಜಯಲಾಭಿಸಿದರೆ, ಹನುಮಂತನ ಉತ್ಸಾಹ ಮತ್ತು ಮಜಾ ಈ ವಾರದ ಲಕ್ಸುರಿ ಬಜೆಟ್ ಗೆದ್ದುಕೊಳ್ಳಲು ಕಾರಣವಾಯಿತು. ಹಾಸ್ಯ ಮತ್ತು ವಿನೋದದ ನಡುವೆಯೂ, ಬಿಗ್ ಬಾಸ್ ಮನೆ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಿತು.