ಹನುಮಂತ ಮತ್ತು ರಜತ್ ನಡುವೆ ಮಾತಿನ ಸಮರ ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್


ಹನುಮಂತ ಮತ್ತು ರಜತ್ ನಡುವೆ ಮಾತಿನ ಸಮರ ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್ ಬಿಗ್ ಬಾಸ್ ಕನ್ನಡ ಸೀಸನ್ 11 ರ 71ನೇ ದಿನದಲ್ಲಿ, ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಹನುಮಂತ ಮತ್ತು ರಜತ್ ನಡುವೆ ನಾಮಿನೇಷನ್ ವೇಳೆ ಮಾತಿನ ಸಮರವಾಯಿತು. ಹನುಮಂತ ರಜತ್‌ನ್ನು ನಾಮಿನೇಟ್ ಮಾಡಿದ ಬಳಿಕ, ರಜತ್ "ನೀವು ಏನೂ ಕೊಡುವ ಕಾರಣ ನನಗೆ ಇಷ್ಟವಾಗುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಹನುಮಂತ, "ನಾನು ನಿನ್ನಿಗೆ ಇಷ್ಟವಾಗಲು ಬಂದಿಲ್ಲ, ಜನರಿಗೆ ಇಷ್ಟವದರ ಸಾಕು" ಎಂದು ಹೇಳಿ ರಜತ್‌ನ್ನು ಸೈಲೆಂಟ್ ಮಾಡಿದರು. ಈ ಘಟನೆ ಮನೆಯಲ್ಲಿಯೇ ಮಾತ್ರವಲ್ಲ, ಹಳೆಯ ಸ್ಪರ್ಧಿಗಳಾದ ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಮತ್ತು ತುಕಾಲಿ ಸಂತೋಷ್ ಅವರ ಸಮ್ಮುಖದಲ್ಲಿ ನಡೆದಿದ್ದು, ಆಕರ್ಷಣೆಯ ಕೇಂದ್ರಬಿಂದುವಾಗಿ ಪರಿಣಮಿಸಿತು.
ಹಳೆಯ ಸ್ಪರ್ಧಿಗಳ ಆಗಮನದಿಂದ ಮನೆಯ ವಾತಾವರಣ ಹೊಸ ಉತ್ಸಾಹ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ಡ್ರಾಮಾ ಮತ್ತು ತಿರುವುಗಳನ್ನು ಎದುರು ನೋಡುವಂತಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
