Back to Top

ಬಿಗ್ ಬಾಸ್11 ಗೌತಮಿಗೆ ಏನಾಯ್ತು ಬಿಕ್ಕಿಬಿಕ್ಕಿ ಕಣ್ಣೀರು ಇಟ್ಟ ಸ್ಪರ್ಧಿ

SSTV Profile Logo SStv December 3, 2024
ಗೌತಮಿಗೆ ಏನಾಯ್ತು ಬಿಕ್ಕಿಬಿಕ್ಕಿ ಕಣ್ಣೀರು ಇಟ್ಟ ಸ್ಪರ್ಧಿ
ಗೌತಮಿಗೆ ಏನಾಯ್ತು ಬಿಕ್ಕಿಬಿಕ್ಕಿ ಕಣ್ಣೀರು ಇಟ್ಟ ಸ್ಪರ್ಧಿ
ಬಿಗ್ ಬಾಸ್11 ಗೌತಮಿಗೆ ಏನಾಯ್ತು ಬಿಕ್ಕಿಬಿಕ್ಕಿ ಕಣ್ಣೀರು ಇಟ್ಟ ಸ್ಪರ್ಧಿ ಬಿಗ್ ಬಾಸ್​ ಗೇಮ್​​ನಲ್ಲಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ, ಎರಡು ಟಿವಿ ಚಾನೆಲ್​​ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ನಿನ್ನೆಯಿಂದ ಬಿಗ್​ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡಿದೆ. ಅಂತೆಯೇ ಟಿವಿ ವಾಹಿನಿಯ ಎದುರಾಳಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತಿದೆ. ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್​ಗೆ ಸಂಬಂಧಿಸಿದಂತೆ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್​ ಮಾಡಿದೆ. ಅದರಲ್ಲಿ ಶಿಶಿರ್ ಅವರು, ಐಶ್ವರ್ಯರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಕೇಳಿಕೊಂಡಿದ್ದಾರೆ. ಅದೇ ರೀತಿ ಗೌತಮಿಗೆ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್​ ನೀಡಲಾಗಿದೆ. ಮೆಣಸಿನಕಾಯಿ ತಿಂದ ಗೌತಮಿ ನೆಲಕ್ಕೆ ಬಿದ್ದು ಹೊರಳಾಡಿ ಕಣ್ಣೀರು ಇಟ್ಟಿದ್ದಾರೆ. ಉಳಿದ ಸ್ಪರ್ಧಿಗಳು ಅವರಿಗೆ ನೀರು ಕೊಟ್ಟು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಮಂಜು, ಇಲ್ಲಿ ಟ್ರಿಮ್ಮರ್ ಇದೆ. ರಜತ್ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಸವಾಲ್ ಹಾಕ್ತೇನೆ ಎಂದಿದ್ದಾರೆ. ಅದಕ್ಕೆ ರಜತ್ ಓಕೆ ಎಂದಿದ್ದು, ಮಂಜು ಬಳಿ ಕೂತಿದ್ದಾರೆ. ಮಂಜು ಟ್ರಿಮ್ ಮಾಡ್ತಿದ್ದಾರೆ. ಇನ್ನು, ಚೈತ್ರ ಹಾಗೂ ತ್ರಿವಿಕ್ರಮ್ ಮಧ್ಯೆ ಗಲಾಟೆ ಆಗಿದೆ. ಮಾತಿನ ಬರದಲ್ಲಿ ಚೈತ್ರಾ ಮುಚ್ಚಿಕೊಂಡು ಕೂತ್ಕೋಬೇಕು. ಅದಕ್ಕೆ ಸಿಟ್ಟಿಗೆದ್ದ ತ್ರಿವಿಕ್ರಮ್ ಚೈತ್ರಾ ಜೊತೆ ಮಾತಿಗೆ ಇಳಿದಿದ್ದಾರೆ.