ಗೌತಮಿಗೆ ಬಿಗ್ ಬಾಸ್ ಮನೆಯಲ್ಲಿ ಅಸಮಾಧಾನ ಸ್ಪರ್ಧಿಗಳ ಟೀಕೆ


ಗೌತಮಿಗೆ ಬಿಗ್ ಬಾಸ್ ಮನೆಯಲ್ಲಿ ಅಸಮಾಧಾನ ಸ್ಪರ್ಧಿಗಳ ಟೀಕೆ ಬಿಗ್ ಬಾಸ್ ಮನೆಯೊಳಗೆ ನಟಿ ಗೌತಮಿ ಜಾದವ್ ಬಗ್ಗೆ ಸ್ಪರ್ಧಿಗಳ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳವಾರದ ಸಂಚಿಕೆಯಲ್ಲಿ, ಗೌತಮಿ ವಿರುದ್ಧ ಹಲವು ಸ್ಪರ್ಧಿಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ವಿಶೇಷವಾಗಿ ಚೈತ್ರಾ ಕುಂದಾಪುರ ಹಾಗೂ ಶಿಶಿರ್ ಅವರು ಗೌತಮಿಯನ್ನು ಟಾರ್ಗೆಟ್ ಮಾಡಿದರು.
ಶಿಶಿರ್ ತಮ್ಮ ಅಭಿಪ್ರಾಯ ಹಂಚಿಕೊಂಡು, “ಗೌತಮಿಗೆ ಅಡುಗೆ ಅಥವಾ ಟಾಸ್ಕ್ ಮಾಡುವ ಆಸಕ್ತಿ ಕೇವಲ ಅವಕಾಶ ಬಂದ್ರೆ ಮಾತ್ರ ಕಾಣುತ್ತದೆ. ಅವರ ಪಾಸಿಟಿವಿಟಿ ಕೇವಲ ಮಾತಿನಲ್ಲಿ ಮಾತ್ರ, ಆದರೆ ನೆಗೆಟಿವಿಟಿ ಹೆಚ್ಚು” ಎಂದು ಟೀಕಿಸಿದರು.
ಚೈತ್ರಾ ಹಾಗೂ ಮೋಕ್ಷಿತಾ ಕೂಡ ಗೌತಮಿಯ ನಡವಳಿಕೆಯನ್ನು ಪ್ರಶ್ನಿಸಿದರು. ಚೈತ್ರಾ ಗೌತಮಿಯ ಹಠದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಹನುಮಂತ ಮತ್ತು ಇತರ ಸ್ಪರ್ಧಿಗಳು, ಉಗ್ರಂ ಮಂಜು ಅವರ ಸಹಕಾರವಿಲ್ಲದೇ ಗೌತಮಿ ಮನೆಯಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ 65 ದಿನಗಳ ಬಿಗ್ ಬಾಸ್ ಹದಿನಿಂತಿದ್ದು, ಸ್ಪರ್ಧಿಗಳ ನಡುವಿನ ಅಭಿಪ್ರಾಯ ವೈವಿಧ್ಯತೆ ಆಟದ ರೋಚಕತೆ ಹೆಚ್ಚಿಸಿದೆ. ಉಗ್ರಂ ಮಂಜು, ಗೌತಮಿಯ ಪರವಾಗಿ ನಿಲ್ಲುತ್ತಾ, “ಗೌತಮಿಯು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮನರಂಜನೆಗೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ” ಎಂದು ಬಲವಾದ ಸಮರ್ಥನೆ ನೀಡಿದರು.
ಈ ವಾದ-ಪ್ರತಿವಾದಗಳು ಬಿಗ್ ಬಾಸ್ ಮನೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಡ್ರಾಮಾ ಸೃಷ್ಟಿಸೋ ಸಾಧ್ಯತೆ ಹೆಚ್ಚಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
