ಗೋವಾದಲ್ಲಿ ಅಮ್ಮನ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್!


ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತಮ್ಮ ಅಮ್ಮ, ಹಿರಿಯ ನಟಿ ಮಮತಾ ರಾವ್ ಅವರ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಗೋವಾದಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ಈ ಸಂತೋಷದಲ್ಲಿ ಭಾಗಿಯಾಗಿದ್ದು, ಅದ್ಭುತ ಕ್ಷಣಗಳ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಆಚರಣೆಯಲ್ಲಿ ರಕ್ಷಿತಾ ಅವರ ಅಮ್ಮ ಮಮತಾ ರಾವ್, ತಂದೆ ಬಿ.ಸಿ. ಗೌರಿಶಂಕರ್, ಸಹೋದರ ರಾಣಾ, ಭಾವಜೆ, ಪುತ್ರ ಸೂರ್ಯ ಸೇರಿದಂತೆ ಕುಟುಂಬದ ಎಲ್ಲರೂ ಇದ್ದರು. ಆದರೆ ಪತಿ ಜೋಗಿ ಪ್ರೇಮ್ ಈ ಸಂಭ್ರಮದಲ್ಲಿ ಕಾಣಿಸಿಲ್ಲ.
ರಕ್ಷಿತಾ ಇಂಗ್ಲಿಷ್‌ನಲ್ಲಿ, “Happy birthday mummy… this was just a very beautiful time together…” ಎಂಬ ಮಾತುಗಳ ಮೂಲಕ ತಮ್ಮ ಆನಂದವನ್ನು ಹಂಚಿಕೊಂಡಿದ್ದಾರೆ. ಮಮತಾ ರಾವ್ ಅವರು ಕೂಡ ಕನ್ನಡ ಚಲನಚಿತ್ರರಂಗದ ಹೆಸರಾಂತ ನಟಿಯಾಗಿದ್ದು, ‘ಹೊಸ ಬೆಳಕು’, ‘ಕಾಡಿನ ಬೆಂಕಿ’, ‘ಪ್ರಾಯ ಪ್ರಾಯ ಪ್ರಾಯ’ ಮುಂತಾದ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು.
ಇಂತಹ ಕಲಾತ್ಮಕ ಕುಟುಂಬದಿಂದ ಬಂದ ರಕ್ಷಿತಾ ಪ್ರೇಮ್, 'ಅಪ್ಪು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, ಈಗ ನಿರ್ಮಾಪಕಿಯಾಗಿ ತಮ್ಮ ಹೆಜ್ಜೆ ಬದಲಿಸುತ್ತಿದ್ದಾರೆ. ಈ ಬಾರಿ ಆವರ ಅಮ್ಮನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಎಲ್ಲರಿಗೂ ಖುಷಿಯ ಕ್ಷಣಗಳನ್ನು ನೀಡಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
