"ನಿಮಗೆ ಇದೆಲ್ಲಾ ಬೇಕಾ?" ಎಂಬ ಕಾಮೆಂಟ್ ಪ್ರಶ್ನೆಗಳಿಗೆ ರಾಗಿಣಿ ಪ್ರಜ್ವಲ್ ಸ್ಪಷ್ಟ ಪ್ರತಿಕ್ರಿಯೆ!


ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಕೇವಲ ನಟಿಯಲ್ಲದೆ ಫಿಟ್‌ನೆಸ್ ಟ್ರೈನರ್ ಮತ್ತು ನೃತ್ಯಗಾರ್ತಿಯೂ ಹೌದು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವರು, ತಮ್ಮ ಡ್ಯಾನ್ಸ್ ವಿಡಿಯೋಗಳು ಹಾಗೂ ಫಿಟ್‌ನೆಸ್ ವರ್ಕ್‌ಶಾಪ್‌ಗಳಿಂದ ಗಮನ ಸೆಳೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ‘ರ್ಯಾಪಿಡ್ ರಶ್ಮಿ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ನಿಮಗೆ ಇದೆಲ್ಲಾ ಬೇಕಾ? ಯಾಕೆ ಇಷ್ಟೆಲ್ಲಾ ಕಷ್ಟ ಪಡ್ತೀರಾ?” ಎಂಬ ಪ್ರಶ್ನೆಗಳಿಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಹಂಚಿಕೊಂಡರು. “ನನಗೆ ಏನಾದರೂ ಸಿಗಬೇಕು ಅಂತ ಅಂದ್ರೆ, ಅದಕ್ಕೆ ನಾನು ಶ್ರಮ ಪಡಬೇಕು. ಯಾರೂ ಯಾರ ಜೀವನ ಹೇಗಿರಬೇಕು ಅನ್ನೋದನ್ನ ನಿರ್ಧರಿಸಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
2015ರಲ್ಲಿ ಪ್ರಜ್ವಲ್ ದೇವರಾಜ್ ಜೊತೆ ಮದುವೆಯಾದ ರಾಗಿಣಿ, ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಅವರ ಲವ್ ಸ್ಟೋರಿ ಹಾಗೂ ವೈವಾಹಿಕ ಜೀವನವೂ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದೆ. ಅಭಿವೃದ್ಧಿ, ಆತ್ಮವಿಶ್ವಾಸ ಹಾಗೂ ಶ್ರಮದ ಮೂಲಕ ಮುನ್ನಡೆಯುತ್ತಿರುವ ರಾಗಿಣಿ ಪ್ರಜ್ವಲ್ ಈಗ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
