Back to Top

'ಎಕ್ಕ' ಹಿಟ್ ಬಳಿಕ ಜಾಲಿ ಮೂಡ್‌ನಲ್ಲಿ ಯುವ ರಾಜ್‌ಕುಮಾರ್ – ಇನ್‌ಸ್ಟಾಗ್ರಾಂ ವೀಡಿಯೋಗಳು ವೈರಲ್!

SSTV Profile Logo SStv July 30, 2025
'ಎಕ್ಕ' ಹಿಟ್ ಬಳಿಕ ಜಾಲಿ ಮೂಡ್‌ನಲ್ಲಿ ಯುವ ರಾಜ್‌ಕುಮಾರ್
'ಎಕ್ಕ' ಹಿಟ್ ಬಳಿಕ ಜಾಲಿ ಮೂಡ್‌ನಲ್ಲಿ ಯುವ ರಾಜ್‌ಕುಮಾರ್

ನಟ ಯುವ ರಾಜ್‌ಕುಮಾರ್ ಅವರ ‘ಎಕ್ಕ’ ಸಿನಿಮಾ ಯಶಸ್ಸಿನ ಅಲೆ ಮೇಲೆ ಸಾಗುತ್ತಿದೆ. ಜುಲೈ 18ರಂದು ಬಿಡುಗಡೆಯಾದ ಈ ಚಿತ್ರ ಈಗಾಗಲೇ 3ನೇ ವಾರವನ್ನು ಸೇರಿದ್ದು, ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಮಾಸ್ ಮತ್ತು ಫ್ಯಾಮಿಲಿ ಪ್ರೇಕ್ಷಕರ ಮನಸ್ಸು ಗೆದ್ದಿದೆ.

‘ಸು ಫ್ರಂ ಸೋ’, ‘ಸಯ್ಯಾರ’, ‘ಮಹಾವತಾರ್ ನರಸಿಂಹ’ ಹಾಗೂ ಇತರ ಸಿನಿಮಾಗಳ ನಡುವೆ ‘ಎಕ್ಕ’ ಉತ್ತಮ ಪ್ರದರ್ಶನ ನೀಡುತ್ತಿದೆ. ಇನ್ನು ಮುಂದೆ ಯುವನು ದುನಿಯಾ ಸೂರಿ ನಿರ್ದೇಶನದ ಹೊಸ ಲವ್ ಸ್ಟೋರಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ಯಶಸ್ಸನ್ನು ಗಳಿಸಿರುವ ನಂತರ, ಯುವ ಕೆಲ ದಿನಗಳ ವಿಶ್ರಾಂತಿಯಲ್ಲಿದ್ದಾರೆ. ತಮ್ಮ ಸಹೋದರ ವಿನಯ್ ಹಾಗೂ ಪತ್ನಿ ವಂದಿತಾ ಜೊತೆಗೆ ಜಾಲಿ ಮೂಡ್‌ನಲ್ಲಿ ಸುತ್ತಾಡುತ್ತಿರುವ ಯುವ, ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮೋಜು-ಮಸ್ತಿ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ.

‘ಎಕ್ಕ’ ಹಿನ್ನಲೆಯಲ್ಲಿ ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಒಟ್ಟಾಗಿ ಯುವ ಅವರ 3ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲವನ್ನು ಹುಟ್ಟುಹಾಕಿದೆ.