‘ಈಗ’ ನನ್ನ ಬೆಸ್ಟ್ ಸಿನಿಮಾ: ಎಸ್.ಎಸ್. ರಾಜಮೌಳಿ ಬೆಸ್ಟ್ ಪಿಕ್ ಆಗಿರುವ ಸುದೀಪ್ ಅಭಿನಯದ ಚಿತ್ರ


ಭಾರತೀಯ ಚಿತ್ರರಂಗದಲ್ಲಿ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಎಸ್.ಎಸ್. ರಾಜಮೌಳಿ ಅವರು direction ಮಾಡಿದ ಎಲ್ಲಾ ಸಿನಿಮಾಗಳೂ ಬ್ಲಾಕ್ ಬಸ್ಟರ್ ಆಗಿವೆ. ಆದರೆ ಅವರ ನೆಚ್ಚಿನ ಚಿತ್ರ ಯಾವುದು ಎಂದು ಕೇಳಿದಾಗ, ಹಲವು ಜನರನ್ನು ಅಚ್ಚರಿ ಪಡಿಸುವ ಉತ್ತರ ನೀಡಿದ್ದಾರೆ. ‘ಬಾಹುಬಲಿ’ ಅಥವಾ ‘ಆರ್ಆರ್ಆರ್’ ಅಲ್ಲ, ಅವರಿಗೆ ಇಷ್ಟವಾದ ಸಿನಿಮಾವೆಂದರೆ – ‘ಈಗ’.
ಈ ವಿಷಯವನ್ನು ಅವರು ಜೂನಿಯರ್ ಎನ್.ಟಿ.ಆರ್ ಅವರ ಹೊಸ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿದರು. “ಈಗ ನನ್ನ ಬೆಸ್ಟ್ ಸಿನಿಮಾ” ಎಂಬುದು ರಾಜಮೌಳಿ ಅವರ ಸ್ಪಷ್ಟ ಮಾತು. ಈ ಚಿತ್ರದಲ್ಲಿ ನಾನಿ, ಸಮಂತಾ ಮತ್ತು ಸುದೀಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ವಿಶೇಷವೆಂದರೆ ಒಂದು ನೊಣ ಪಾತ್ರವೂ ಚಿತ್ರದಲ್ಲಿ ಕೇಂದ್ರಬಿಂದುವಾಗಿತ್ತು!
ವೈಶಿಷ್ಟ್ಯಪೂರ್ಣ ಕಥೆ, ಭಾವನಾತ್ಮಕ ನಿರೂಪಣೆ ಮತ್ತು ಭರ್ಜರಿ ಗ್ರಾಫಿಕ್ಸ್‌ನಿಂದ ಕೂಡಿದ ಈ ಚಿತ್ರ, ಮಾಸ್ ಅಂಶವಿಲ್ಲದಿದ್ದರೂ ಜನರ ಮನಸೆಳೆದಿತು. ಬ್ಲಾಕ್ ಬಸ್ಟರ್ ಸಿನಿಮಾಗಳ ಪೈಕಿ ತಮ್ಮ ಆದ್ಯತೆ ‘ಈಗ’ ಗೆ ನೀಡಿರುವ ರಾಜಮೌಳಿ ಅವರ ಅಭಿಪ್ರಾಯ ಚಿತ್ರಮಂದಿರ ಪಟುಗಳಿಗೆ ಮತ್ತೊಂದು ಹೊಸ ದೃಷ್ಟಿಕೋನ ನೀಡಿದೆ.
ಈಗ ಅವರು ಮಹೇಶ್ ಬಾಬು ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದ ನಾಯಕಿಯಾಗಿರುವ ಪ್ರಿಯಾಂಕಾ ಚೋಪ್ರಾ ಮತ್ತು ಶೂಟಿಂಗ್ ಸ್ಥಳವಾದ ಕೀನ್ಯಾ ಕೂಡ ಚಿತ್ರಕ್ಕೆ ಭಾರೀ ಕುತೂಹಲ ಹುಟ್ಟಿಸುತ್ತಿವೆ. 2026ರಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
