ದ್ವೇಷದ ನಡುವಲ್ಲೂ ಪ್ರೀತಿಗೆ ಧನ್ಯವಾದ ಹೇಳಿದ ರಮ್ಯಾ: ಭಾವುಕ ಪೋಸ್ಟ್ ವೈರಲ್


ಅಭಿಮಾನಿಗಳಿಂದ ಬಂದ ಅಸಭ್ಯ ಮೆಸೇಜ್‌ಗಳ ನಂತರ ನಟಿ ರಮ್ಯಾ ಭಾವುಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ʻದ್ವೇಷ ಮತ್ತು ಹತಾಶೆಯಿಂದ ತುಂಬಿರುವ ಜಗತ್ತಿನಲ್ಲಿ ಪ್ರೀತಿ ತೋರಿದ ನಿಮಗೆ ಧನ್ಯವಾದʼ ಎಂಬ ಪೋಸ್ಟ್ ಮೂಲಕ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇತ್ತೀಚೆಗೆ ʻರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕುʼ ಎಂಬ ಕಾರಣಕ್ಕಾಗಿ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಚಿತ್ರರಂಗದ ಹಲವರು ಹಾಗೂ ಸಾಮಾಜಿಕ ಜಾಲತಾಣದ ಬಳಕೆದಾರರು ರಮ್ಯಾ ಪರವಾಗಿ ನಿಂತರು. ಈ ಬೆಂಬಲಕ್ಕೆ ಪ್ರತಿಯಾಗಿ ನಟಿ ಇನ್ಸ್ಟಾಗ್ರಾಮ್ ಮೂಲಕ ಧನ್ಯವಾದ ಹೇಳಿದ್ದಾರೆ.
ಈ ಮಧ್ಯೆ ನಟ ವಿನಯ್ ಗೌಡ, ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್, ನಟ ಪ್ರಥಮ್ ಸೇರಿದಂತೆ ಅನೇಕರು ರಮ್ಯಾ ಪರವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. 'ನಿಜವಾದ ಅಭಿಮಾನಿಗಳು ಇಂತಹ ಅಸಭ್ಯತೆಯನ್ನು ಮಾಡುವುದಿಲ್ಲ' ಎಂಬ ಮಾತುಗಳಿಂದ ಮಹಿಳಾ ದೌರ್ಜನ್ಯ ವಿರುದ್ಧ ಸ್ಫಷ್ಟ ನಿಲುವು ವ್ಯಕ್ತವಾಗುತ್ತಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
