ಬಣ್ಣ ಬಣ್ಣದ ಹೂವಿನೊಂದಿಗೆ ಪೋಸ್ ಕೊಟ್ಟ ರಿತನ್ಯಾ ವಿಜಯ್, ಫ್ಯಾನ್ಸ್ ಫುಲ್ ಫಿದಾ!


ಸ್ಯಾಂಡಲ್‌ವುಡ್‌ನಲ್ಲಿ ಹೊಸ ತಾರೆ ಮೂಡಿಬರುತ್ತಿರುವ ದುನಿಯಾ ವಿಜಯ್ ಅವರ ಮಗಳು ರಿತನ್ಯಾ ವಿಜಯ್, ಇತ್ತೀಚೆಗೆ ಮಾಡಿದ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ. ನೀಲಿ ಜೀನ್ಸ್ ಮತ್ತು ಬಿಳಿ ಶರ್ಟ್ ಜಾಕೆಟ್ ಲುಕ್, ಹಾಗೂ ಕೈಯಲ್ಲಿ ಬಣ್ಣ ಬಣ್ಣದ ಹೂವಿನ ಗುಚ್ಚದಿಂದ ಪೂರ್ಣ ಗ್ಲಾಮರ್ ಮೋಡ್‌ಗೆ ಬಂದಿರುವ ರಿತನ್ಯಾ, ತಮ್ಮ ನವೀನ ಶೈಲಿಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ.
ಈ ಫೋಟೋ ಶೂಟ್‌ನಲ್ಲಿ ರಿತನ್ಯಾ ನೀಡಿರುವ ಪ್ರತಿಯೊಂದು ಪೋಸ್‌ನೂ ಪ್ರೋಫೆಷನಲ್ ಹಾಗೂ ಆಕರ್ಷಕವಾಗಿದೆ. ಒಂದರಲ್ಲಿ ಸ್ಮೈಲಿಂಗ್ ಲುಕ್, ಇನ್ನೊಂದರಲ್ಲಿ ಗ್ಲಾಮರಸ್ ಲುಕ್ – ಎಲ್ಲವೂ ಪ್ರೇಕ್ಷಕರ ಮನಸ್ಸು ಗೆಲ್ಲುವ ರೀತಿಯಾಗಿದೆ. ಈ ಫೋಟೋಗಳನ್ನು ವೀಕ್ಷಿಸಿದ ಅಭಿಮಾನಿಗಳು “ಸ್ಟೈಲಿಷ್ ಸ್ಟಾರ್ ಡಾಟರ್” ಎಂದು ಕಮೆಂಟ್‌ಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ಮಕ್ಕಳು ಬಿಗ್ ಎಂಟ್ರಿಗೆ ಸಿದ್ಧರಾಗುತ್ತಾರೆ. ಅದೇ ರೀತಿಯಲ್ಲಿ ರಿತನ್ಯಾ ಕೂಡ ತಮ್ಮ ನಟನೆಯ ಜರ್ನಿಗೆ ಸಜ್ಜಾಗಿದ್ದಾರೆ. ದುನಿಯಾ ವಿಜಯ್ ಅವರೇ ನಿರ್ದೇಶಿಸುತ್ತಿರುವ ‘ಲ್ಯಾಂಡ್‌ಲಾರ್ಡ್’ ಎಂಬ ಚಿತ್ರದ ಮೂಲಕ ಅವರು ಬೆಳ್ಳಿ ಪರದೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇಷ್ಟೆ ಅಲ್ಲ, ಇನ್ನೊಂದು ಚಿತ್ರದಲ್ಲಿ ದೊಡ್ಮನೆಯ ಯುವರಾಜ್ ಕುಮಾರ್ ಅವರ ಜೊತೆಗೆ ನಾಯಕಿಯಾಗಿ ನಟಿಸುತ್ತಿರುವ ರಿತನ್ಯಾ, ಈ ಚಿತ್ರಕ್ಕೆ ದುನಿಯಾ ಸೂರಿ ನಿರ್ದೇಶಕ. ಈ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗವಹಿಸಿ ಶುಭ ಹಾರೈಕೆ ಸಲ್ಲಿಸಿದ್ದೂ ವಿಶೇಷ. ಅಡಿಗಟ್ಟಿನಿಂದಲೇ ಗ್ಲಾಮರ್ ಹಾಗೂ ಪ್ರತಿಭೆಯ ಮಿಶ್ರಣದೊಂದಿಗೆ ಮುಂದೆ ಬರುತ್ತಿರುವ ರಿತನ್ಯಾ ವಿಜಯ್, ಸ್ಯಾಂಡಲ್‌ವುಡ್‌ಗೆ ಹೊಸ ನಾಯಕಿಯಾಗಿ ರೂಪುಗೊಳ್ಳುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
