Back to Top

"ಮಗನಿಗಾಗಿ ಬದುಕುತ್ತಿದ್ದೇನೆ... ಅಪ್ಪನ ಪ್ರೀತಿ ಬೇಕು ಅಂತೇನಿಲ್ಲ!" – ಡಿವೋರ್ಸ್ ಬಳಿಕ ಜಾಹ್ನವಿ ಮನದಾಳದ ಮಾತು

SSTV Profile Logo SStv July 23, 2025
ಡಿವೋರ್ಸ್ ಬಳಿಕ ಜಾಹ್ನವಿ ಮನದಾಳದ ಮಾತು
ಡಿವೋರ್ಸ್ ಬಳಿಕ ಜಾಹ್ನವಿ ಮನದಾಳದ ಮಾತು

ನಿರೂಪಕಿ ಹಾಗೂ ನಟಿ ಜಾಹ್ನವಿ, ತಮ್ಮ ವೈವಾಹಿಕ ಜೀವನ ಹಾಗೂ ಸಿಂಗಲ್ ಆಗಿರುವ ಕುರಿತು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಕೆಲ ವರ್ಷಗಳ ಹಿಂದೆ ತಮ್ಮ ಮಾಜಿ ಪತಿ ಕಾರ್ತಿಕ್ ಅವರಿಂದ ಡಿವೋರ್ಸ್ ಪಡೆದು ಬೇರ್ಪಟ್ಟ ಜಾಹ್ನವಿ, ಇದೀಗ ಅವರ ಮಾಜಿ ಪತಿ ಮದುವೆಯಾಗಿದ್ದು, ಮಗು ಕೂಡ ಇದೆ ಎಂದು ಬಹಿರಂಗಪಡಿಸಿದ್ದಾರೆ.

“ಅವರು ಅವರ ಹೆಂಡತಿ ಮತ್ತು ಮಗನೊಂದಿಗೆ ಚೆನ್ನಾಗಿರಲಿ. ನಾನು ಎರಡು ದಿನ ಬೇಜಾರಾದರೂ, ಈಗ ಸಿಂಗಲ್ ಆಗಿ ಸಂತೋಷವಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.

ಎರಡನೇ ಮದುವೆ ಬಗ್ಗೆ ಗಾಸಿಪ್ ಹರಿದಾಡುತ್ತಿದ್ದಂತೆಯೇ ಜಾಹ್ನವಿ ಸ್ಪಷ್ಟನೆ ನೀಡಿದ್ದಾರೆ – “ನನ್ನ ಮೊದಲ ಮದುವೆಯ ಅನುಭವ ಸಾಕಾಗಿದೆ. ಮರುಮದುವೆಗೆ ಯಾವುದೇ ಆಸಕ್ತಿ ಇಲ್ಲ. ನನ್ನ ಕೆಲಸ ಹಾಗೂ ಮಗನ ಭವಿಷ್ಯವೇ ನನ್ನ ಪ್ರಾಧಾನ್ಯ.”

ತಮ್ಮ ಮಗ ಈಗಾಗಲೇ 8ನೇ ತರಗತಿಯಲ್ಲಿ ಓದುತ್ತಿದ್ದಾನೆ ಎಂಬುದನ್ನು ತಿಳಿಸಿದ್ದಾರೆ ಜಾಹ್ನವಿ. “ನನಗೆ ಅಥವಾ ಮಗನಿಗೆ ಯಾರದಾದರೂ ಕೊರತೆಯೆನಿಸುತ್ತಿಲ್ಲ. ನನಗೆ ಈಗ ಮತ್ತೊಬ್ಬ ವ್ಯಕ್ತಿ ಜೀವನದಲ್ಲಿ ಬೇಕು ಎಂಬ ಅನಿಸಿಕೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ಜಾಹ್ನವಿ ಸ್ತ್ರೀಸ್ವಾಭಿಮಾನದ ಸ್ಫಷ್ಟ ಉದಾಹರಣೆಯಾಗಿ ತಮ್ಮ ಬದುಕನ್ನು ಮುನ್ನಡೆಸುತ್ತಿದ್ದಾರೆ.