Back to Top

ಗುರುತೇ ಸಿಗದಂತೆ ಬದಲಾದ ರಶ್ಮಿಕಾ – ‘Dirty Cut 25’ ಮ್ಯಾಗಜಿನ್ ಗೆಟಪ್ ನಲ್ಲಿ ಶಾಕ್ ಲುಕ್!

SSTV Profile Logo SStv July 9, 2025
‘Dirty Cut 25’ ಮ್ಯಾಗಜಿನ್ ಮೂಲಕ ರಶ್ಮಿಕಾ
‘Dirty Cut 25’ ಮ್ಯಾಗಜಿನ್ ಮೂಲಕ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರು ‘ಡರ್ಟಿ ಕಟ್ 25’ ಮ್ಯಾಗಜಿನ್ ಮುಖಪುಟಕ್ಕಾಗಿ ಮಾಡಿರುವ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಗೆಟಪ್‌ನಲ್ಲಿ ರಶ್ಮಿಕಾ ಗುರುತಿಸುವುದೇ ಕಷ್ಟ ಎಂಬಷ್ಟು ವಿಭಿನ್ನವಾಗಿ ಅವರು ಕಾಣಿಸಿಕೊಂಡಿದ್ದಾರೆ. ಕಡುಕೆಂಪು ಲಿಪ್‌ಸ್ಟಿಕ್, ಹೊಸ ಹೇರ್‌ಸ್ಟೈಲ್‌ನೊಂದಿಗೆ ಫ್ಯಾಷನ್‌ನಲ್ಲಿ ಎಕ್ಸ್‌ಪರಿಮೆಂಟ್‌ ಮಾಡಿರುವ ರಶ್ಮಿಕಾ ಲುಕ್‌ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಬಂದಿದೆ.

ಅಮಲಾ ಪೌಲ್ ಸೇರಿದಂತೆ ಅನೇಕರು ಈ ಹೊಸ ಲುಕ್ ಮೆಚ್ಚಿಕೊಂಡಿದ್ದಾರೆ. ತಮ್ಮ ವೃತ್ತಿ ಸಾಧನೆಗಾಗಿ ಪ್ರಶಂಸೆ ಪಡೆದಿರುವ ರಶ್ಮಿಕಾ, ಈಗಾಗಲೇ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಯಶಸ್ವಿ ಪಾತ್ರ ನಿರ್ವಹಿಸಿದ್ದಾರೆ.

ಇತ್ತೀಚೆಗಷ್ಟೆ ಕೊಡವ ಸಮುದಾಯದ ಬಗ್ಗೆ ಮಾಡಿದ ವಿವಾದಾತ್ಮಕ ಹೇಳಿಕೆಯಿಂದ ಅವರು ಟೀಕೆಗೆ ಗುರಿಯಾಗಿದ್ದರೂ, ಅವರ ಭಿನ್ನ ಶೈಲಿಯ ಫೋಟೋಶೂಟ್ ಮತ್ತೊಮ್ಮೆ ಸುದ್ದಿಯಲ್ಲಿದೆ.