Back to Top

ಡೆವಿಲ್ ಸಿನಿಮಾದಲ್ಲಿ ದರ್ಶನ್ ಪುತ್ರ ವಿನೀಶ್ ನಟಿಸಿಲ್ಲ! ವಿಡಿಯೋದಿಂದ ಹುಟ್ಟಿದ ಗೊಂದಲಕ್ಕೆ ತೆರೆ

SSTV Profile Logo SStv July 4, 2025
ಡೆವಿಲ್ ಸಿನಿಮಾದಲ್ಲಿ ದರ್ಶನ್ ಪುತ್ರ ವಿನೀಶ್ ನಟಿಸಿಲ್ಲ
ಡೆವಿಲ್ ಸಿನಿಮಾದಲ್ಲಿ ದರ್ಶನ್ ಪುತ್ರ ವಿನೀಶ್ ನಟಿಸಿಲ್ಲ

ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ‘ಡೆವಿಲ್’ ಚಿತ್ರದ ಮೇಕಿಂಗ್ ವಿಡಿಯೋದಲ್ಲಿ, ದರ್ಶನ್ ಪುತ್ರ ವಿನೀಶ್ ಮೇಕಪ್ ಮಾಡಿಸುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ವಿನೀಶ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಊಹಾಪೋಹಗಳು ಹರಿದಾಡಿದವು.

ಇದಕ್ಕೆ ಸ್ಪಷ್ಟತೆ ದೊರಕಿದ್ದು, ವಿನೀಶ್ ಡೆವಿಲ್ ಸಿನಿಮಾದಲ್ಲಿ ಯಾವುದೇ ಪಾತ್ರವಲ್ಲ ಎಂದು ಮೂಲಗಳು ತಿಳಿಸಿವೆ. ಅವರು ಕೇವಲ ಸೆಟ್‌ನಲ್ಲಿ ಮೇಕಪ್ ಮಾಡಿಸಿಕೊಂಡಿದ್ದು, ಚಿತ್ರದಲ್ಲಿಲ್ಲ. ಈ ಹಿಂದೆ 'ಐರಾವತ' ಮತ್ತು 'ಯಜಮಾನ' ಚಿತ್ರಗಳಲ್ಲಿ ತಂದೆ ದರ್ಶನ್ ಜೊತೆಗೆ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಾರಣ ಈ ಬಾರಿಗೆ ಸಹ ನಟಿಸುತ್ತಾರೆ ಎನ್ನಲಾಗಿತ್ತು.

ಇದೇ ವೇಳೆ, ದರ್ಶನ್ ಅವರ ಸಹೋದರಿಯ ಮಗ ಚಂದು ಸಿನಿಮಾ ಪಾಲಾಗಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಅವರು ‘ಡೆವಿಲ್’ ಯೋಜನೆಯಿಂದ ಹೊರನಡೆದಿದ್ದಾರೆ ಎಂದು ದರ್ಶನ್ ಬಿಚ್ಚಿಟ್ಟಿದ್ದರು.

‘ಡೆವಿಲ್’ ಚಿತ್ರದ ರಾಜಸ್ಥಾನ ಭಾಗದ ಶೂಟಿಂಗ್ ಮಾರ್ಚ್ ಕೊನೆ ವಾರದಲ್ಲಿ ನಡೆಯಿತು. ಉದಯಪುರದ ರಾಫೆಲ್ಸ್ ಹೋಟೆಲ್ನಲ್ಲಿ 10 ದಿನಗಳ ಕಾಲ ಚಿತ್ರಿಕರಣ ನಡೆಯಿದ್ದು, ಪ್ರಮುಖ ಸನ್ನಿವೇಶಗಳ ಜೊತೆಗೆ ಸಣ್ಣ ಆಕ್ಷನ್ ಸೀಕ್ವೆನ್ಸ್ ಕೂಡ ಚಿತ್ರೀಕರಿಸಲಾಗಿದೆ. ಇದೆಲ್ಲದರ ನಡುವೆ ವಿನೀಶ್ ಮೇಕಪ್ ದೃಶ್ಯ ಮಾತ್ರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ ಸತ್ಯ!