Back to Top

“ದಯೆಯಿಂದಿರಿ” ಎಂದು ಡಿ-ಬಾಸ್ ಫ್ಯಾನ್ಸ್‌ಗೆ ರಕ್ಷಿತಾ ಕಿವಿಮಾತು; ರಮ್ಯಾಗೆ ಟಾಂಗ್?

SSTV Profile Logo SStv July 28, 2025
`ದಯೆಯಿಂದಿರಿ’ ಡಿ-ಬಾಸ್ ಫ್ಯಾನ್ಸ್‌ಗೆ ರಕ್ಷಿತಾ ಕಿವಿಮಾತು
`ದಯೆಯಿಂದಿರಿ’ ಡಿ-ಬಾಸ್ ಫ್ಯಾನ್ಸ್‌ಗೆ ರಕ್ಷಿತಾ ಕಿವಿಮಾತು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ನಟಿ ರಮ್ಯಾ ದರ್ಶನ್ ಅಭಿಮಾನಿಗಳ ವಿರುದ್ಧ ಗರಂ ಆಗಿರುವ ಸಮಯದಲ್ಲಿ, ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಮನವೊಲಿಸುವ ಕಿವಿಮಾತು ನೀಡಿದ್ದಾರೆ. "ನೀವು ಜನರ ಮಾನಸಿಕ ಸ್ಥಿತಿಗತಿಯನ್ನು ನೋಡೋಕೆ ಸಾಧ್ಯವಿಲ್ಲ, ದಯೆಯಿಂದಿರಿ," ಎಂದು ರಕ್ಷಿತಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಇನ್ನೊಂದು ಸ್ಟೋರಿಯಲ್ಲಿ “ಮೂಲಭೂತವಾಗಿ ಮಾನವನಿಗಿರಬೇಕಾದ ವಿನಯತೆ ವೈರಲ್ ಆಗಬೇಕು” ಎಂಬ ಹಠಾತ್ ಮೆಸೇಜ್, ನಟಿ ರಮ್ಯಾಗೆ ತಿರುಗುಟಾಂಗ್ ಆಗಿದ್ದಾ ಎಂಬ ಪ್ರಶ್ನೆ ಹುಟ್ಟಿಸಿದೆ. ಇದು ಡಿ-ಬಾಸ್ ಫ್ಯಾನ್ಸ್ ಪರವಾದ ನಿಖರ ಪ್ರತಿಕ್ರಿಯೆಯೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು, ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ಡರ್ಶನ್ ಫ್ಯಾನ್ಸ್‌ ಅಕೌಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಬಹಿರಂಗಪಡಿಸಿ, ಕಠಿಣ ವಾಗ್ದಾಳಿ ನಡೆಸಿದ್ದಾರೆ. "ಸ್ತ್ರೀದ್ವೇಷಿ ಮನೋಭಾವ" ಎಂಬ ಪದ ಬಳಸಿ, ಇಂಥವರಿಂದಲೇ ಹೆಣ್ಮಕ್ಕಳು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಮ್ಯಾ ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ದರ್ಶನ್ ಅಭಿಮಾನಿಗಳ ವಿರುದ್ಧ ಎಲ್ಲಾ ಮೆಸೇಜ್‌ಗಳೊಂದಿಗೆ ಅಧಿಕೃತ ದೂರು ಕೊಡಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರಕ್ಷಿತಾ ಅವರ ಶಾಂತಿತುಂಬಿದ ಕಿವಿಮಾತು ಎಲ್ಲರ ಗಮನ ಸೆಳೆದಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.