Back to Top

ದರ್ಶನ್ ಫ್ಯಾಮಿಲಿ ಫೋಟೋ ವೈರಲ್; 'ನಮ್ಮ ತೂಗುದೀಪ ಕುಟುಂಬವನ್ನ ಒಟ್ಟಿಗೆ ನೋಡುವುದೇ ಚೆಂದ' ಅಂದ್ರು ಫ್ಯಾನ್ಸ್‌

SSTV Profile Logo SStv July 4, 2025
ದರ್ಶನ್ ಕುಟುಂಬದ ಫೋಟೋ ವೈರಲ್
ದರ್ಶನ್ ಕುಟುಂಬದ ಫೋಟೋ ವೈರಲ್

'ಚಾಲೆಂಜಿಂಗ್ ಸ್ಟಾರ್' ದರ್ಶನ್ ತೂಗುದೀಪ ಅವರು ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫ್ಯಾಮಿಲಿ ಗ್ರೂಪ್ ಫೋಟೋ ನೋಡಿ ಅಭಿಮಾನಿಗಳು "ನಮ್ಮ ತೂಗುದೀಪ ಫ್ಯಾಮಿಲಿಯನ್ನ ಒಟ್ಟಿಗೆ ನೋಡುವುದೇ ಚೆಂದ" ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಫೋಟೋದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್, ತಾಯಿ ಮೀನಾ, ಅಕ್ಕ ದಿವ್ಯಾ ಬಾವ ಮಂಜುನಾಥ್, ಸೋದರಳಿಯ ಚಂದು, ಸಹೋದರ ದಿನಕರ್ ಹಾಗೂ ಅವರ ಪತ್ನಿ ಮತ್ತು ಮಗ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಇದ್ದರು. ಜೊತೆಗೆ ಎರಡು ಜೋಡಿ ಎತ್ತುಗಳು ಕೂಡ ಫೋಟೋಗೆ ವಿಶೇಷ ಆಕರ್ಷಣೆಯಾಯಿತು.

ಸಿನಿಮಾ ಅಪ್‌ಡೇಟ್: ದರ್ಶನ್ ನಟನೆಯ 'ದಿ ಡೆವಿಲ್' ಚಿತ್ರದ ಮಾತಿನ ಭಾಗದ ಶೂಟಿಂಗ್ ಮುಕ್ತಾಯವಾಗಿದೆ. ಇನ್ನೂ ಕೆಲ ಹಾಡು ಮತ್ತು ಫೈಟ್‌ಗಳ ಚಿತ್ರೀಕರಣ ಬಾಕಿಯಿದ್ದು, ಇದು ವಿದೇಶದಲ್ಲಿ ನಡೆಯುವ ಸಾಧ್ಯತೆ ಇದೆ. 2025ರಲ್ಲಿ ಸಿನಿಮಾ ತೆರೆಗೆ ಬರಲಿದೆ. ರಚನಾ ರೈ ನಾಯಕಿಯಾಗಿ ಅಭಿನಯಿಸುತ್ತಿದ್ದು, ಮಿಲನ ಪ್ರಕಾಶ್ ನಿರ್ದೇಶಕರಾಗಿದ್ದಾರೆ. ಅಭಿಮಾನಿಗಳು ಈ ಫ್ಯಾಮಿಲಿ ಫೋಟೋ ನೋಡಿಕೊಂಡು ದರ್ಶನ್‌ರಿಗಾಗಿ ಶುಭ ಹಾರೈಸುತ್ತಿದ್ದಾರೆ.