"ದರ್ಶನ್ ಹೊಸ ಪೋಸ್ಟ್ ವೈರಲ್: ಬೇರೆಯವರು ಮಾಡ್ತಾರೆ ಅಂತ ನಾವು ಸಹ ಅದೇ ಮಾಡೋದು ಸರಿಯಲ್ಲ"


'ಸ್ಯಾಂಡಲ್‌ವುಡ್ ಕ್ವೀನ್' ರಮ್ಯಾ ಅವರು ಈಗಾಗಲೇ ನಟ ದರ್ಶನ್ ಅಭಿಮಾನಿಗಳಿಂದ ತಮಗೆ ಬಂದ ಅಶ್ಲೀಲ ಸಂದೇಶಗಳು ಮತ್ತು ಜೀವ ಬೆದರಿಕೆಗಳ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದು ಸುದ್ದಿಯಲ್ಲಿದೆ. ಈ ನಡುವೆ, ನಟ ದರ್ಶನ್ ತೂಗುದೀಪ ಅವರು 10 ವರ್ಷಗಳ ಹಿಂದೆಯೇ ತಮ್ಮ ಅಭಿಮಾನಿಗಳಿಗೆ ನೀಡಿದ್ದ ಸಂಕೇತಾತ್ಮಕ ಸಂದೇಶದ ಫೇಸ್‌ಬುಕ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
"ನನ್ನ ನಿಜವಾದ ಅಭಿಮಾನಿಗಳಾಗಿದ್ದರೆ ಬೇರೆ ಕಲಾವಿದರನ್ನು ನಿಂದಿಸುವ ಕೆಲಸದಿಂದ ದೂರವಿರಿ. ಇದರಿಂದ ನನಗೆ ನೋವಾಗುತ್ತದೆ. ಬೇರೆಯವರು ಮಾಡ್ತಾರೆ ಅಂತ ನಾವು ಸಹ ಅದೇ ಮಾಡೋದು ಸರಿಯಲ್ಲ. ಎಲ್ಲರನ್ನೂ ಪ್ರೀತಿಸಿ, ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸಿ," ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಈ ಪೋಸ್ಟ್ 2015ರ ಡಿಸೆಂಬರ್ 28ರಂದು ಪ್ರಕಟವಾಗಿದ್ದು, 7 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ. ಅದೇ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಮತ್ತು ಬೆದರಿಕೆ ಸಂದೇಶಗಳನ್ನು ಕಳಿಸಿರುವ ಆರೋಪ ಎದುರಾಗಿದ್ದು, ಇದರ ಬೆನ್ನಲ್ಲೇ ರಮ್ಯಾ ಪೊಲೀಸ್ ದೂರು ಸಲ್ಲಿಸಿದ್ದಾರೆ. 43 ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ, ರಮ್ಯಾ ಅವರು "ಅವರು ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ. ಹಳೆಯ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಹಲವರು "ದರ್ಶನ್ ಅವರು ಒಳ್ಳೆಯ ಸಂದೇಶ ನೀಡಿದ್ದಾರೆ, ಆದರೆ ಅವರ ಅಭಿಮಾನಿಗಳು ಅದನ್ನು ಪಾಲಿಸುತ್ತಿಲ್ಲ" ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇಂತಹ ಪ್ರಕರಣಗಳಲ್ಲಿ ಕಲಾವಿದರ ನೈತಿಕ ಹೊಣೆಗಾರಿಕೆ ಹಾಗೂ ಸಾಮಾಜಿಕ ಪ್ರಭಾವದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇನ್ನು ಅಶ್ಲೀಲ ಸಂದೇಶ ಕಳುಹಿಸಿದವರು ದರ್ಶನ್ ಅಭಿಮಾನಿಗಳೇನಾ ಅಥವಾ ಬೇರೆ ಯಾರೋ ಅನ್ನೋದು ಮುಂದಿನ ತನಿಖೆಯಿಂದ ಸ್ಪಷ್ಟವಾಗಲಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
