Back to Top

ದರ್ಶನ್‌ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಇದೇ ಜುಲೈ 19ಕ್ಕೆ 'ಡೆವಿಲ್' ಕಡೆಯಿಂದ ಗಿಫ್ಟ್!

SSTV Profile Logo SStv July 16, 2025
ದರ್ಶನ್‌ ಫ್ಯಾನ್ಸ್‌ಗೆ ಗುಡ್ ನ್ಯೂಸ್ 'ಡೆವಿಲ್' ಕಡೆಯಿಂದ ಗಿಫ್ಟ್!
ದರ್ಶನ್‌ ಫ್ಯಾನ್ಸ್‌ಗೆ ಗುಡ್ ನ್ಯೂಸ್ 'ಡೆವಿಲ್' ಕಡೆಯಿಂದ ಗಿಫ್ಟ್!

ನಟ ದರ್ಶನ್ ಅಭಿಮಾನಿಗಳ ನಿರೀಕ್ಷೆಯ ಸುದ್ದಿ! ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಜುಲೈ 19ರ ಶನಿವಾರ ರಾತ್ರಿ 8 ಗಂಟೆಗೆ ಅನಾವರಣಗೊಳ್ಳಲಿದೆ. ಅತ್ತಿಬೆಲೆಯಲ್ಲಿ ದರ್ಶನ್ ಅಭಿಮಾನಿಗಳ ಸಮ್ಮುಖದಲ್ಲಿ ಈ ಪೋಸ್ಟರ್ ಬಿಡುಗಡೆ ಆಗಲಿದ್ದು, ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಬಿಡುಗಡೆ ಮಾಡಲಾಗುತ್ತಿದೆ.

ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ, ದರ್ಶನ್ ಅವರ ಬಂಧನ ಮತ್ತು ಜಾಮೀನು ಪ್ರಕರಣದ ನಂತರ ತೆರೆಗೆ ಬರಲಿರುವ ಮೊದಲ ಸಿನಿಮಾ ಎಂಬ ಕಾರಣದಿಂದಲೇ ಭಾರಿ ಹೈಪ್ ಮೂಡಿಸಿದೆ. ಚಿತ್ರದ ಹಾಡುಗಳ ಚಿತ್ರೀಕರಣಕ್ಕಾಗಿ ದರ್ಶನ್ ಇದೀಗ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ.

ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ದರ್ಶನ್ ಅಭಿಮಾನಿಗಳು ಈ ಚಿತ್ರದಿಂದ ಭಾರೀ ನಿರೀಕ್ಷೆ ಹೊಂದಿರುವುದು ಸ್ಪಷ್ಟ. ಮೋಷನ್ ಪೋಸ್ಟರ್ ಬಿಡುಗಡೆ ನಂತರ, ‘ದಿ ಡೆವಿಲ್’ ಚಿತ್ರದ ಕುರಿತು ಇನ್ನಷ್ಟು ಅಪ್‌ಡೇಟ್ಸ್‌ಗೆ ಕಾತುರದಿಂದ ಕಾಯಲಾಗುತ್ತಿದೆ.