Back to Top

“ಡಿ-ಕಂಪನಿ ಎಂದರೆ ಡುಬಾಕ್ ಕಂಪನಿ, ದರ್ಬೇಸಿಗಳ ಕಂಪನಿ ಅಂತಾ ಹೆಸರಿಟ್ಟುಕೊಳ್ಳಿ”; ದರ್ಶನ್ ಫ್ಯಾನ್ಸ್‌ಗೆ ಬೆಂಡೆತ್ತಿದ ಪ್ರಥಮ್

SSTV Profile Logo SStv July 29, 2025
ದರ್ಶನ್ ಫ್ಯಾನ್ಸ್‌ಗೆ ಬೆಂಡೆತ್ತಿದ ಒಳ್ಳೆ ಹುಡ್ಗ ಪ್ರಥಮ್
ದರ್ಶನ್ ಫ್ಯಾನ್ಸ್‌ಗೆ ಬೆಂಡೆತ್ತಿದ ಒಳ್ಳೆ ಹುಡ್ಗ ಪ್ರಥಮ್

ನಟ ಪ್ರಥಮ್ ಮತ್ತೆ ವೈರಲ್! ಡಿ-ಕಂಪನಿ ಎಂಬ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟಾಂಗ್ ನೀಡಿರುವ ಅವರು, ದರ್ಶನ್ ಅಭಿಮಾನಿಗಳ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದಾರೆ. “ಡಿ-ಕಂಪನಿ ಎಂದರೆ ಡುಬಾಕ್ ಕಂಪನಿ, ದರ್ಬೇಸಿಗಳ ಕಂಪನಿ ಅಂತಾ ಹೆಸರಿಟ್ಟುಕೊಳ್ಳಿ” ಎಂದು ಒಳ್ಳೆ ಹುಡ್ಗ ಪ್ರಥಮ್ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, “ಸೈಬರ್ ಕ್ರೈಮ್, ಇಂಟರ್‌ಪೋಲ್, ನ್ಯಾಶನಲ್ ಇನ್ವೆಸ್ಟಿಗೇಶನ್ ಎಲ್ಲವನ್ನೂ ಮುಚ್ಚಿ ಡಿ-ಕಂಪನಿಗೆ ಎಲ್ಲ ಕೇಸ್ ಕೊಡಿ, ಅವರೇ ಇನ್ವೆಸ್ಟಿಗೇಟ್ ಮಾಡ್ಲಿ!” ಎಂದು ವ್ಯಂಗ್ಯವಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಚಿಪ್ಸು ತಿನ್ನೋಕೆ ಹೋಗಿದ್ದೆನೆಂದು ಹಬ್ಬಿಸಿರುವ ತಪ್ಪು ಮಾಹಿತಿಗೆ ತಿರುಗೇಟು ನೀಡಿದ ಅವರು, “ಮೊದಲು ಬುದ್ಧಿ, ನಂತರ ಶಿಕ್ಷಣ” ಎಂದು ಬೆಂಡೆತ್ತಿದ್ದಾರೆ.

ಇದೇ ವೇಳೆ, ದೊಡ್ಡಬಳ್ಳಾಪುರ ದೇವಸ್ಥಾನದಲ್ಲಿ ಪ್ರಥಮ್‌ ಅವರಿಗೆ ಡ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಲಾಗಿದೆ ಎನ್ನುವ ಆಡಿಯೋ ಕೂಡ ವೈರಲ್ ಆಗಿದ್ದು, ಅವರು ಈ ಕುರಿತು ಎಸ್ಪಿ ಸಿಕೆ ಬಾಬಾ ಅವರನ್ನು ಭೇಟಿಯಾಗಿ ದೂರು ನೀಡಲು ಸೂಚನೆ ಪಡೆದಿದ್ದಾರೆ.

ಎಸ್ಪಿ ಸಿಕೆ ಬಾಬಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, “ಅವರು ದೂರು ನೀಡಿದ್ರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ. ಇದೀಗ ಈ ಘಟನೆಯು ಚಿತ್ರರಂಗದ ರಾಜಕೀಯ ಮತ್ತು ಅಭಿಮಾನಿ ಸಂಘಟನೆಗಳ ನಡುವಿನ ಗಂಭೀರ ವಿವಾದಕ್ಕೆ ಕಾರಣವಾಗುತ್ತಿದೆ.