“ನಿಮ್ಮ ವಿಷಯ ಟಾಯ್ಲೆಟ್‌ನಲ್ಲಿ ಮಾತಾಡುವುದಕ್ಕೆ ಯೋಗ್ಯ”: ದರ್ಶನ್ ಫ್ಯಾನ್ಸ್ ವಿರುದ್ಧ ಪ್ರಥಮ್ ಗರಂ


ನಟ ಪ್ರಥಮ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ವಾಕ್ಸಮರ ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ದೊಡ್ಡಬಳ್ಳಾಪುರದ ದೇವಸ್ಥಾನದಲ್ಲಿ ಪ್ರಥಮ್ ಮೇಲೆ ಆಯುಧಗಳನ್ನು ತೋರಿಸಿ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪದಿಂದ ಆರಂಭವಾದ ಈ ವಿವಾದ ಈಗ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿವಾದದ ರೂಪದಲ್ಲಿದೆ.
ಡರ್ಷನ್ ಅಭಿಮಾನಿಗಳ ‘ಡಿ ಕಂಪನಿ’ ಪೇಜ್‌ನಲ್ಲಿ ಪ್ರಥಮ್ ವಿರುದ್ಧ ಪೋಸ್ಟ್ ಬಂದ ಬಳಿಕ, ಪ್ರಥಮ್ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. "ಡಿ ಕಂಪನಿ ಎಂದರೆ ಡುಬಾಕ್ ಕಂಪನಿ, ದರ್ಬೇಸಿಗಳ ಕಂಪನಿ" ಎಂದು ತೀವ್ರ ಶಬ್ದಗಳಲ್ಲಿ ಪ್ರತಿಕ್ರಿಯಿಸಿದ ಅವರು, “ನಿಮ್ಮ ವಿಷಯ ಟಾಯ್ಲೆಟ್‌ನಲ್ಲಿ ಮಾತಾಡುವುದಕ್ಕೆ ಯೋಗ್ಯ” ಎಂದು ವಾಗ್ದಾಳಿ ನಡೆಸಿದ್ದಾರೆ.
"ಚಿಪ್ಸ್, ಪಪ್ಸು ತಿನ್ನೋಕೆ ನಾನು ಯಾವ ರೌಡಿಯ ಹತ್ತಿರ ಹೋಗಲ್ಲ. ನಾನು ಫಿಟ್ನೆಸ್ ಕಾಪಾಡಿಕೊಳ್ಳೋದು ನಾನೇನು ತಿನ್ನೋದೇ ಇಲ್ಲದ ಕಾರಣ" ಎಂದು ಹೇಳಿದ್ದಾರೆ. ಪೊಲೀಸ್ ದೂರಿನ ಬಗ್ಗೆ ಮಾತನಾಡುತ್ತ, “ಆಪ್ತರೊಬ್ಬರು ಬಿಟ್ಟುಬಿಡಿ ಎಂದರಿಂದ ದೂರು ಕೊಡಲಿಲ್ಲ” ಎಂದೂ ತಿಳಿಸಿದ್ದಾರೆ.
ಇಡೀ ಘಟನೆಗೆ ಸಂಬಂಧಿಸಿದಂತೆ ಎಸ್‌ಪಿಯಿಂದಲೇ ನಿಖರ ಮಾಹಿತಿ ಬರಲಿದೆ ಎಂದು ತಿಳಿಸಿದ ಪ್ರಥಮ್, “ಜ್ಞಾನ, ಶಿಕ್ಷಣ ಬೇಕು. ಡಿ ಕಂಪನಿಯ ತನಿಖೆ ನಿಲ್ಲಿಸಿ ಬಿಡಿ” ಎಂದು ಕಿಡಿಕಾರಿದ್ದಾರೆ. ಈ ಟ್ವಿಸ್ತೊಂದರ ನಡುವೆ ಅಭಿಮಾನಿಗಳ ನಡುವೆ ಮತ್ತಷ್ಟು ಸಂಚಲನ ಮೂಡಿಸಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
