Back to Top

ಬ್ರೆಡ್, ಚಿಪ್ಸ್, ಖಾರ ಬನ್ ವಿವಾದ: ದರ್ಶನ್ ಫ್ಯಾನ್ಸ್ ಮತ್ತು ಪ್ರಥಮ್ ನಡುವಿನ ಸೋಶಿಯಲ್ ಮೀಡಿಯಾ ವಾರ್

SSTV Profile Logo SStv July 29, 2025
ದರ್ಶನ್ ಫ್ಯಾನ್ಸ್ ಮತ್ತು ಪ್ರಥಮ್ ನಡುವಿನ ಸೋಶಿಯಲ್ ಮೀಡಿಯಾ ವಾರ್
ದರ್ಶನ್ ಫ್ಯಾನ್ಸ್ ಮತ್ತು ಪ್ರಥಮ್ ನಡುವಿನ ಸೋಶಿಯಲ್ ಮೀಡಿಯಾ ವಾರ್

ಇತ್ತೀಚೆಗಷ್ಟೇ ನಟ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಯತ್ನವಾಗಿದೆ ಎಂಬ ಆರೋಪಗಳಿಂದ ಸ್ಯಾಂಡಲ್‌ವುಡ್‌ ಮತ್ತೊಂದು ವಿವಾದಕ್ಕೆ ತುತ್ತಾಗಿದೆ. ಈ ಕುರಿತು ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ, ಪ್ರಥಮ್ ವಿರುದ್ಧ ಟೀಕೆಗಳನ್ನು ಮುಳಿದಿದ್ದಾರೆ.

“ಬಾಸ್ ಜೈಲಲ್ಲಿದ್ದಾಗ ಅಭಿಮಾನಿಗಳಿಗೆ ಪ್ರಚೋದನೆ ನೀಡಿದವರು ಈಗ ಹಲ್ಲೆ ಬಗ್ಗೆ ಮಾತನಾಡುವುದು ನಾಟಕ” ಎಂದು ಅವರು ಆರೋಪಿಸಿದ್ದಾರೆ. ‘ಪ್ರಥಮ್ ರೌಡಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಿಂಡಿ ತಿಂದು ಜಗಳ ಉಂಟುಮಾಡಿದ್ದಾರೆ’ ಎಂಬ ಮಾತುಗಳನ್ನೂ ಹಾಕಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಪ್ರಥಮ್, "ನೋಡ್ರಪ್ಪ, ಈ D company ಅಂತ ಬೆವರಿಸಿದ್ವ್ರು ಇವರು! ನಾನು ಚಿಪ್ಸ್ ತಿನ್ನೋಕೆ ರೌಡಿ ಹತ್ತಿರ ಹೋದವನಂತೆ! ನಾಳೆ SP ಯಾಕೆ ಏನಾಯ್ತು ಅಂತ ಹೇಳಿದ್ದಾರೆ!" ಎಂದು ಕಿಡಿಕಾರಿದ್ದಾರೆ.

ಈ ಸಂಧರ್ಭದಲ್ಲಿ ಪ್ರಥಮ್ ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ವಿವಾದ ಇನ್ನಷ್ಟು ತೀವ್ರ ಸ್ವರೂಪ ಪಡೆದಿದ್ದು, ಈ ಪ್ರಸ್ತುತ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.