Back to Top

ದರ್ಶನ್ ಬಳಸುತ್ತಿರುವ ಫೋನ್ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ; ಸ್ಮಾರ್ಟ್‌ಫೋನ್ ಮಾಡೆಲ್ ಯಾವುದು?

SSTV Profile Logo SStv July 18, 2025
ದರ್ಶನ್ ಬಳಸುತ್ತಿರುವ ಫೋನ್ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ
ದರ್ಶನ್ ಬಳಸುತ್ತಿರುವ ಫೋನ್ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ

ಸಿನಿ ಪ್ರೇಮಿಗಳ ನೆಚ್ಚಿನ ನಟ ದರ್ಶನ್‌ ಯಾವ ಮೊಬೈಲ್ ಬಳಸ್ತಾರೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಥಾಯ್ಲೆಂಡ್‌ಗೆ ‘ಡೆವಿಲ್’ ಚಿತ್ರದ ಶೂಟಿಂಗ್‌ಗಾಗಿ ತೆರಳಿರುವ ದರ್ಶನ್, ವಿಮಾನ ನಿಲ್ದಾಣದಲ್ಲಿ ಪಾಸ್‌ಪೋರ್ಟ್ ಹಿಡಿದಿದ್ದ ಕ್ಷಣದಲ್ಲಿ ಅವರ ಕೈಯಲ್ಲಿದ್ದ ರೆಡ್ ಕಲರ್ ಫೋನ್ ಅಭಿಮಾನಿಗಳ ಗಮನ ಸೆಳೆದಿದೆ.

ಇದು ಚೀನಾದ ಹೆಸರಾಂತ ಕಂಪನಿಯ ಹುವಾವೆ ಮೆಟ್ (Huawei Mate) ಸ್ಮಾರ್ಟ್‌ಫೋನ್ ಎಂದು ತಿಳಿದುಬಂದಿದ್ದು, ಇದರ ಪ್ರಾರಂಭಿಕ ಬೆಲೆ ₹1.5 ಲಕ್ಷ, ಹಾಗೂ ಟ್ರೈ-ಫೋಲ್ಡ್‌ ವೇರಿಯಂಟ್ ಬೆಲೆ ₹3,59,999 ಆಗಿದೆ!

ಅಂದಹಾಗೆ, ದರ್ಶನ್ ಧರಿಸುವ ಬಟ್ಟೆ, ಶೂ, ವಾಚ್ ಮತ್ತು ಇತ್ತೀಚಿನ ಹೈಎಂಡ್ ಫೋನ್‌ಗಳೂ ಕೂಡ ಅವರ ಐಷಾರಾಮಿ ಜೀವನ ಶೈಲಿಗೆ ಸಾಕ್ಷಿಯಾಗಿದೆ.

ಇದೇ ವೇಳೆ, ‘ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಜುಲೈ 19ರಂದು ಬಿಡುಗಡೆಯಾಗಲಿದ್ದು, ಅಕ್ಟೋಬರ್ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆಯೂ ಇದೆ. Fans ಮಾತ್ರ ದರ್ಶನ್ ಸ್ಟೈಲ್‌ಗೂ, ಅವರ ಹೊಸ ಸಿನಿಮಾಗಗೂ ಅಚ್ಚುಮೆಚ್ಚು!