Back to Top

"ಡಿ ಬಾಸ್‌ ಮೇಲೆ ಗೌರವವಿದ್ದರೆ ವಿವಾದಕ್ಕೆ ರಿಯಾಕ್ಟ್ ಮಾಡಬೇಡಿ" – ಅಭಿಮಾನಿಗಳಿಗೆ ಡಿ ಕಂಪನಿ ಮನವಿ

SSTV Profile Logo SStv July 28, 2025
ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ
ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಂತ್ರಸ್ತರ ಕುಟುಂಬದ ಪರ ನಿಂತಿರುವ ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಮೆಂಟ್‌ಗಳು ಮತ್ತು ಮೆಸೇಜ್‌ಗಳು ಹೆಚ್ಚಾಗುತ್ತಿದ್ದಂತೆ, ಈ ವಿವಾದ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿಯಾಗಿ ಹರಡಿದೆ. ಇದೀಗ, ದರ್ಶನ್‌ ಅಭಿಮಾನಿಗಳ ಅಧಿಕೃತ ಫ್ಯಾನ್ಸ್ ಪೇಜ್ ‘ಡಿ ಕಂಪನಿ’ ಒಂದು ಮನವಿಯನ್ನು ಹಂಚಿಕೊಂಡಿದೆ.

'ಡಿ ಬಾಸ್‌ ಮೇಲೆ ಗೌರವವಿರುವ ಯಾರೂ ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡಬೇಡಿ, ಯಾರಿಗೂ ಮೆಸೇಜ್ ಮಾಡಬೇಡಿ. ಸಮಾಜಮುಖಿ ಕಾರ್ಯಗಳ ಮೂಲಕ ನಮ್ಮ ಅಭಿಮಾನಿಗಳ ಹತ್ತಿರವಾದ ಸೇವೆ ಸಾಕ್ಷಿ' ಎಂಬುದಾಗಿ ಡಿ ಕಂಪನಿ ಪೋಸ್ಟ್‌ನಲ್ಲಿ ತಿಳಿಸಿದೆ. ಜೊತೆಗೆ ‘ಕಾಲಯ ತಸ್ಮೈ ನಮಃ’ ಎಂಬ ಸಂದೇಶದೊಂದಿಗೆ ಡೆವಿಲ್ ಸಿನಿಮಾದ ಪೋಸ್ಟರ್‌ವನ್ನೂ ಹಂಚಿಕೊಂಡಿದೆ.

ಇದಕ್ಕೂ ಮುನ್ನ ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಕಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಶೇರ್ ಮಾಡಿ, ದರ್ಶನ್ ಫ್ಯಾನ್ಸ್‌ ವಿರುದ್ಧ ಕಾನೂನು ಕ್ರಮಕ್ಕೆ ಸಜ್ಜಾಗಿದ್ದಾರೆ. ಮಹಿಳಾ ಆಯೋಗ ಕೂಡ ಈ ಪ್ರಕರಣದ ಕುರಿತು ಗಮನ ಹರಿಸಿದ್ದು, ರಮ್ಯಾ ದೂರು ನೀಡಿದರೆ 3ರಿಂದ 7 ವರ್ಷ ಜೈಲು ಶಿಕ್ಷೆ ಸಾಧ್ಯವೆಂದು ಎಚ್ಚರಿಕೆ ನೀಡಿದೆ.

ಸುದ್ದಿ ಮಾಧ್ಯಮಗಳಿಗೆ ಮಾತನಾಡಿದ ರಮ್ಯಾ, ಅಶ್ಲೀಲ ಮೆಸೇಜ್‌ಗಳು ಸ್ತ್ರೀದ್ವೇಷದ ಪರಿಪಾಟಿಯ ಭಾಗವಾಗಿದ್ದು, ಇಂಥವರಿಂದಲೇ ಮಹಿಳೆಯರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ತೀವ್ರ ಪ್ರತಿಕ್ರಿಯೆ ನೀಡಿದ್ದರು. ಈ ನಡುವೆ ಡಿ ಕಂಪನಿಯ ಶಾಂತಿಯುತ ಮನವಿ, ಈ ವಿವಾದದ ಮಧ್ಯೆ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಪ್ರಯತ್ನವಾಗಿದೆ.