Back to Top

ಚಿರಂಜೀವಿ-ನಯನತಾರಾ ರೊಮ್ಯಾಂಸ್: 29 ವರ್ಷ ವಯಸ್ಸಿನ ಅಂತರಕ್ಕೂ ತೆರೆಮೇಲೆ ಮ್ಯಾಜಿಕ್!

SSTV Profile Logo SStv July 17, 2025
ಚಿರಂಜೀವಿ-ನಯನತಾರಾ ರೊಮ್ಯಾಂಸ್
ಚಿರಂಜೀವಿ-ನಯನತಾರಾ ರೊಮ್ಯಾಂಸ್

ಹಾಡಿನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ‘ಮೆಗಾ 157’ ಚಿತ್ರದಲ್ಲಿ ಈ ಜೋಡಿ ಸೇರಿದ್ದು, ಹಾಡಿನ ಚಿತ್ರೀಕರಣ ಕೇರಳದಲ್ಲಿ ನಡೆಯಲಿದೆ.

ಇವರಿಬ್ಬರ ನಡುವೆ 29 ವರ್ಷದ ವಯಸ್ಸು ಅಂತರವಿದ್ದರೂ, ತೆರೆಮೇಲೆ ಅವರ ಕಮಿಸ್ಟ್ರಿಗೆ ಅಡ್ಡಿಯಾಗಿಲ್ಲ. ಚಿರಂಜೀವಿಗೆ 69 ವರ್ಷ, ನಯನತಾರಾ 40 ವರ್ಷದವರು. ಆದರೆ, ಈ ಅಂತರಕ್ಕೂ ಮೀರಿ ಇಬ್ಬರ ಕಾಂಬಿನೇಷನ್‌ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಹೊಂದಿದ್ದಾರೆ.

ಈ ಹಾಡಿಗೆ ಭಾನು ಮಾಸ್ಟರ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಶೂಟಿಂಗ್ ಜುಲೈ 23ರೊಳಗೆ ಮುಗಿಯಲಿದೆ. ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲಿ ಮುಂದಿನ ಶೆಡ್ಯೂಲ್ ನಡೆಯಲಿದ್ದು, 2026ರ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ.

ಇದರ ಜೊತೆಗೆ, ಚಿರಂಜೀವಿ ‘ವಿಶ್ವಂಭರ’ ಸಿನಿಮಾದಲ್ಲಿಯೂ ತೊಡಗಿಸಿಕೊಂಡಿದ್ದು, ನಯನತಾರಾ ಕನ್ನಡದ ‘ಟಾಕ್ಸಿಕ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.