Back to Top

ಬಿಗ್​ಬಾಸ್​ ಸೀಸನ್​ 11 ಚಿನ್ನದ ಚಾನ್ಸ್ ಮಿಸ್ ಮಾಡಿದ ಐಶ್ವರ್ಯಾ ಕ್ಯಾಪ್ಟನ್ ಆಗೋ ಕನಸು ತುಂಬಾ ದೂರವೇ

SSTV Profile Logo SStv December 20, 2024
ಚಿನ್ನದ ಚಾನ್ಸ್ ಮಿಸ್ ಮಾಡಿದ ಐಶ್ವರ್ಯಾ
ಚಿನ್ನದ ಚಾನ್ಸ್ ಮಿಸ್ ಮಾಡಿದ ಐಶ್ವರ್ಯಾ
ಬಿಗ್​ಬಾಸ್​ ಸೀಸನ್​ 11 ಚಿನ್ನದ ಚಾನ್ಸ್ ಮಿಸ್ ಮಾಡಿದ ಐಶ್ವರ್ಯಾ ಕ್ಯಾಪ್ಟನ್ ಆಗೋ ಕನಸು ತುಂಬಾ ದೂರವೇ ಸ್ಪರ್ಧಿಗಳ ನಡುವೆ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ಈ ಪೈಪೋಟಿಯಲ್ಲಿ ಎರಡು ಬಾರಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಕ್ಯಾಪ್ಟನ್ ಪಟ್ಟವನ್ನು ಗೆದ್ದಿದ್ದಾರೆ. ಐಶ್ವರ್ಯಾ ಸಿಂಧೋಗಿ ಈ ಬಾರಿ ಸಿಂಗಲ್ ಕ್ಯಾಪ್ಟನ್ ಆಗಬೇಕೆಂಬ ನಿರೀಕ್ಷೆಯಲ್ಲಿದ್ದರು, ಆದರೆ ಅದೃಷ್ಟ ಅವರು ಕಾಣದೇಹೋಯ್ತು. ಐಶ್ವರ್ಯಾ ಈ ಹಿಂದೆ ಜೋಡಿ ಕ್ಯಾಪ್ಟನ್ ಆಗಿದ್ದರೂ, ಈ ಸಲ ಏಕೈಕ ನಾಯಕಿಯಾಗಿ ಆಡಲು ಆಸೆಪಟ್ಟಿದ್ದರು. ಆದ್ರೆ 13ನೇ ವಾರಕ್ಕೆ ಭವ್ಯಾ ಗೌಡ ಮತ್ತೆ ಕ್ಯಾಪ್ಟನ್ ಪಟ್ಟ ಗಿಟ್ಟಿಸಿಕೊಂಡರು. ನಿರಾಶೆಯಲ್ಲಿದ್ದ ಐಶ್ವರ್ಯಾ, "ಈ ಸಲ ಕ್ಯಾಪ್ಟನ್ ಆಗಬೇಡಾ ಎಂದರೆ ನಾನು ಬಿಗ್​ಬಾಸ್ ಮನೆಗೆ ವಿದಾಯ ಹೇಳ್ತೀನಿ" ಎಂದು ಹೇಳಿಕೊಂಡರು. ಈ ಹೇಳಿಕೆಯಿಂದ ವೀಕ್ಷಕರಲ್ಲಿ ಐಶ್ವರ್ಯಾ ಮೇಲೆ ಅನುಮಾನ ಹೆಚ್ಚಾಗಿದೆ. ಇನ್ನು ಮುಂದೆ ಅವರು ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗೋ ಕನಸು ನನಸು ಆಗುತ್ತಾ ಅಥವಾ ಮಿಸ್ ಆಗುತ್ತಾ? ಇದು ಕಾದು ನೋಡಬೇಕಾದ ವಿಷಯ.