ಚೆನ್ನೈನಲ್ಲಿ ಕಿಚ್ಚ ಸುದೀಪ್ ಭೇಟಿಯಾದ ವಿನಯ್ ಗೌಡ – K47 ಚಿತ್ರದಲ್ಲಿ ಅವರೂ ಇದ್ದಾರಾ?


ಚೆನ್ನೈನಲ್ಲಿ ನಡೆದ ಒಂದು ವಿಶೇಷ ಭೇಟಿಯು ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಜೊತೆಗೆ ತೆಗೆಸಿಕೊಂಡ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಿಂದ, ಅವರು ಸುದೀಪ್ ಅಭಿನಯದ K47 ಸಿನಿಮಾದಲ್ಲಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ವಿನಯ್ ಗೌಡ ತಮ್ಮ ಪೋಸ್ಟ್‌ನಲ್ಲಿ, "ಚೆನ್ನೈನಲ್ಲಿ ನನ್ನ ಬಿಗ್ ಬ್ರದರ್ ಕಿಚ್ಚ ಸುದೀಪ್ ಚೆನ್ನಾಗಿ ನೋಡಿಕೊಂಡರು. ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದು, ತಪ್ಪು-ಸರಿಯನ್ನೂ ವಿವರಿಸಿದ್ದಾರೆ." ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, "ಸುದೀಪ್ ನನ್ನ ಮೆಂಟರ್ ಕೂಡ" ಎಂದು ಮನದಾಳದ ಮಾತುಗಳನ್ನೂ ಹಂಚಿಕೊಂಡಿದ್ದಾರೆ.
ಈಗಾಗಲೇ K47 ಸಿನಿಮಾದ ಶೂಟಿಂಗ್ ಚೆನ್ನೈನಲ್ಲಿ ಜೋರಾಗಿ ನಡೆಯುತ್ತಿದ್ದು, ಸುದೀಪ್ ಇದರಲ್ಲಿ ಬ್ಯುಸಿಯಾಗಿದ್ದಾರೆ. ವಿನಯ್ ಅವರ ಭೇಟಿಯು ಕೇವಲ ಸ್ನೇಹಪೂರ್ಣವಾಗಿತ್ತಾ ಅಥವಾ ಚಿತ್ರ ಸಂಬಂಧಿತದ್ದಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರಿಬ್ಬರಿಂದಲೂ ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯೇ ಇದೆ. ಒಟ್ಟಾರೆ, ಈ ಫೋಟೋ ಮತ್ತು ಪೋಸ್ಟ್ ಅಭಿಮಾನಿಗಳಲ್ಲಿ ಹೊಸ ಹಂಬಲ ಹುಟ್ಟಿಸಿರುವುದು ಮಾತ್ರ ನಿಜ!
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
