Back to Top

ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ವಿಶೇಷ ಪೂಜೆ – ಆಷಾಢ ಮಾಸದ ಭಕ್ತಿಭಾವನೆ

SSTV Profile Logo SStv July 2, 2025
ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ವಿಶೇಷ ಪೂಜೆ
ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ವಿಶೇಷ ಪೂಜೆ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್ ಜೊತೆ ಮಂಗಳವಾರ ರಾತ್ರಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಷಾಢ ಮಾಸದ ಶುಭ ಸಂದರ್ಭದೊಂದಿಗೆ ಬೆಟ್ಟದ ದರ್ಶನ ಪಡೆದ ಈ ಜೋಡಿ, ಭಕ್ತಿಯಿಂದ ಪೂಜೆ ಸಲ್ಲಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೂಜೆಯ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರಂತೆ! ಕಳೆದ ಕೆಲ ದಿನಗಳಿಂದ ಶಿವಣ್ಣ ಮೈಸೂರು ಸುತ್ತಮುತ್ತ ಪ್ರವಾಸದಲ್ಲಿದ್ದು, ಪತ್ನಿಯ ಜೊತೆ ಕಬಿನಿ ಡ್ಯಾಂಗೂ ಭೇಟಿ ನೀಡಿದ್ದರು. ಅಲ್ಲಿಯೂ ಅವರು ಮಕ್ಕಳ ಜೊತೆ ಹಾಡಿ, ಫೋಟೋ ತೆಗೆಸಿಕೊಂಡಿದ್ದರು.

1986ರಲ್ಲಿ 'ಆನಂದ್' ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವಣ್ಣ, ಇದೀಗ 40 ವರ್ಷಗಳ ಯಶಸ್ವಿ ಸಿನಿಪಯಣ ಪೂರೈಸಿದ್ದಾರೆ. 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ಸದ್ಯವೂ ಐದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.