Back to Top

ಬಿಗ್ ಬಾಸ್ ಕನ್ನಡ 11‘ನನ್ನ ತಲೆ ಆಫ್ ಆದ್ರೆ ಅಷ್ಟೇ’ ಚೈತ್ರಾ ಮೇಲೆ ರೊಚ್ಚಿಗೆದ್ದ ಹನುಮಂತ

SSTV Profile Logo SStv December 18, 2024
ಚೈತ್ರಾ ಮೇಲೆ ರೊಚ್ಚಿಗೆದ್ದ ಹನುಮಂತ
ಚೈತ್ರಾ ಮೇಲೆ ರೊಚ್ಚಿಗೆದ್ದ ಹನುಮಂತ
ಬಿಗ್ ಬಾಸ್ ಕನ್ನಡ 11‘ನನ್ನ ತಲೆ ಆಫ್ ಆದ್ರೆ ಅಷ್ಟೇ’ ಚೈತ್ರಾ ಮೇಲೆ ರೊಚ್ಚಿಗೆದ್ದ ಹನುಮಂತ ಸ್ಪರ್ಧಿಗಳ ನಡುವೆ ಕಿತ್ತಾಟ ತಾರಕಕ್ಕೇರಿದ್ದು, ಟಾಸ್ಕ್‌ಗಳು ರದ್ದಾಗುವ ಪರಿಸ್ಥಿತಿ ಉಂಟಾಗಿದೆ. ಈ ಮಧ್ಯೆ ಚೈತ್ರಾ ಕುಂದಾಪುರ ಮತ್ತು ಹನುಮಂತ ನಡುವೆ ನಡೆದ ವಾದವು ಗಮನ ಸೆಳೆದಿದೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೋದಲ್ಲಿ, ಹನುಮಂತ ಅವರು ಚೈತ್ರಾ ಮೇಲೆ ಕೋಪಗೊಂಡಿರುವುದು ಸ್ಪಷ್ಟವಾಗಿದೆ. ಟಾಸ್ಕ್ ವೇಳೆ, "ನನ್ ತಲೆ ಆಫ್ ಆದ್ರೆ..!" ಎಂದು ಎಚ್ಚರಿಕೆ ನೀಡಿದ ಹನುಮಂತ ಅವರ ರೊಚ್ಚಿಗೆದ್ದ ನಿಜವಾದ ಕಾರಣ ಏನೆಂಬುದು ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ನಿಯಮ ಉಲ್ಲಂಘನೆ, ಟಾಸ್ಕ್‌ಗಳ ರದ್ದು ಸೇರಿದಂತೆ ಮನೆ ಸದಸ್ಯರ ನಡುವಿನ ಜಿದ್ದುಜಿದ್ದಿನಿಂದ ಮನೆಯ ವಾತಾವರಣ ತೀವ್ರ ಉದ್ವಿಗ್ನವಾಗಿದೆ. ಇಂದು ರಾತ್ರಿ ಪ್ರಸಾರದಲ್ಲಿ ಹನುಮಂತ ಅವರ ಕೋಪಕ್ಕೆ ಕಾರಣವಾದ ಸನ್ನಿವೇಶ ಹೆಚ್ಚಾಗಿ ಸ್ಪಷ್ಟವಾಗಲಿದೆ.