ಬಿಗ್ ಬಾಸ್ ಇತಿಹಾಸದಲ್ಲೇ ಅತಿದೊಡ್ಡ ರೂಲ್ಸ್ ಬ್ರೇಕ್ ಚೈತ್ರಾ ಮತ್ತು ತ್ರಿವಿಕ್ರಮ್ ವಿವಾದ


ಬಿಗ್ ಬಾಸ್ ಇತಿಹಾಸದಲ್ಲೇ ಅತಿದೊಡ್ಡ ರೂಲ್ಸ್ ಬ್ರೇಕ್ ಚೈತ್ರಾ ಮತ್ತು ತ್ರಿವಿಕ್ರಮ್ ವಿವಾದ ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಸ್ಪರ್ಧಿಗಳು ನಿಯಮ ಉಲ್ಲಂಘಿಸುವುದು ಹೊಸದೇನೂ ಅಲ್ಲ, ಆದರೆ ಈ ಬಾರಿ ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ದಿಟ್ಟ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಇಬ್ಬರು ಸ್ಪರ್ಧಿಗಳು ಜೈಲಿನ ನಿಯಮವನ್ನೇ ಮುರಿದು, ಹೌಸ್ ಕಾಪ್ಟನ್ ಮುಂತಿಯೇ ಜೈಲಿನಿಂದ ಹೊರಬಂದು ಬಿಗ್ ಬಾಸ್ ಇತಿಹಾಸದಲ್ಲೇ ಅತಿದೊಡ್ಡ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಚೈತ್ರಾ, ಈಗಾಗಲೇ ಮೂರನೇ ಬಾರಿ ಜೈಲಿಗೆ ಹೋಗಿದ್ದು, ತ್ರಿವಿಕ್ರಮ್‌ಗೆ ಇದು ಮೊದಲ ಅನುಭವ. ಅವರು ಜೈಲಿನೊಳಗೇ "ನಾವು ಹೊರಬರುತ್ತೇವೆ" ಎಂದು ಹೇಳಿ, ಬಳಿಕ ಜೈಲಿನಿಂದ ಹೊರಬಂದು ತಮ್ಮ ಮಾತು ಸಾಧಿಸಿದರು. ಈ ದೃಶ್ಯಗಳು ಕಲರ್ಸ್ ಕನ್ನಡ ಹೊಸ ಪ್ರೋಮೋದಲ್ಲಿ ಪ್ರಸಾರವಾಗಿದ್ದು, ಇಂದಿನ ಎಪಿಸೋಡ್‌ನಲ್ಲಿ ಈ ಇಬ್ಬರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಪ್ರೇಕ್ಷಕರು ಕಾದು ನೋಡುತ್ತಿದ್ದಾರೆ.
ನಿಯಮ ಉಲ್ಲಂಘನೆಗೆ ಕ್ಯಾಪ್ಟನ್ ತೀವ್ರ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಈ ಘಟನೆ ಮನೆಯಲ್ಲಿ ಹೊಸ ಬಿರುಕಿಗೆ ಕಾರಣವಾಗಲಿದೆ. ಇಂದಿನ ಬಿಗ್ ಬಾಸ್ ಸಂಚಿಕೆ ಬಿರುಗಾಳಿಯ ಸಂಚಲನಕ್ಕೆ ಸಾಕ್ಷಿಯಾಗಲಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
