Back to Top

ಬಿಗ್ ಬಾಸ್ ಮನೆಗೆ ಮಂಗಳಾರತಿ, ಚೈತ್ರಾ ಮತ್ತೆ ಆದೇ ತಪ್ಪು

SSTV Profile Logo SStv November 27, 2024
ಚೈತ್ರಾ ಮತ್ತೆ ಆದೇ ತಪ್ಪು
ಚೈತ್ರಾ ಮತ್ತೆ ಆದೇ ತಪ್ಪು
ಬಿಗ್ ಬಾಸ್ ಮನೆಗೆ ಮಂಗಳಾರತಿ, ಚೈತ್ರಾ ಮತ್ತೆ ಆದೇ ತಪ್ಪು ಕಳೆದ ವಾರ ಕಿಚ್ಚ ಸುದೀಪ್ ನಾಮಿನೇಷನ್ ಪ್ರಕ್ರಿಯೆಗೆ ಮನೆಯ ಎಲ್ಲ ಸದಸ್ಯರಿಗೆ ಕಣ್ಣೆತ್ತು ಕ್ಲಾಸ್ ತೆಗೆದುಕೊಂಡಿದ್ದರು. “ಅಸಂಬಂಧ ಕಾರಣಗಳಿಂದ ನಾಮಿನೇಟ್ ಮಾಡೋದು ತಪ್ಪು, ನೀವು ಜೋಕರ್‍ಗಳಂತೆ ಕಾಣುತ್ತೀರಿ” ಎಂದು ಖಡಕ್ ಹಿತೋಪದೇಶ ನೀಡಿದರೂ, ಸ್ಪರ್ಧಿಗಳು ಇನ್ನು ಬುದ್ದಿ ಕಲಿಯದೆ ಅದೇ ರಾಗ, ಅದೇ ಹಾಡು ಮುಂದುವರೆಸಿದ್ದಾರೆ. ಚೈತ್ರಾ-ರಜತ್ ವಾದ ಇಬ್ಬರನ್ನು ನಾಮಿನೇಟ್ ಮಾಡಬೇಕಾದ ಟಾಸ್ಕ್‌ನಲ್ಲಿ, ಚೈತ್ರಾ ಕುಂದಾಪುರ ಮೊದಲಿಗೆ ರಜತ್ ಸುರೇಶ್ ಅವರ ಹೆಸರನ್ನು ಘೋಷಿಸಿ, “ನನ್ನನ್ನು ಬಾಸ್ ಎಂದು ವ್ಯಂಗ್ಯ ಮಾಡುತ್ತಾರೆ” ಎಂದು ಕಾರಣ ನೀಡಿದರು. ಆದರೆ, ಈ ಕಾರಣ ಮನೆ ಸದಸ್ಯರಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಸುದೀಪ್ ಮಾಡಿದ್ದ ಎಚ್ಚರಿಕೆಯಿಂದಲೂ ಸ್ಪರ್ಧಿಗಳ ಆಟದಲ್ಲಿ ಯಾವುದೇ ಬದಲಾವಣೆ ಕಾಣದೇ, ನಾಮಿನೇಷನ್ ಟಾಸ್ಕ್‌ಗಳು ಮತ್ತೆ ರೋಚಕವಾಗುತ್ತಿವೆ. ಈ ವಾರದ ಎಪಿಸೋಡ್ ಇನ್ನಷ್ಟು ಡ್ರಾಮಾಗೆ ವೇದಿಕೆ ಸಿದ್ಧಪಡಿಸಿದೆ.