Back to Top

‘ಸು ಫ್ರಮ್ ಸೋ’ – ಜೀವನದ ನೆನಪುಗಳನ್ನ ಕೆದಕಿದ ಒಂದು ಹೃದಯ ಸ್ಪರ್ಶಿ ಸಿನಿಮಾ: ಚೈತ್ರಾ ಕುಂದಾಪುರ

SSTV Profile Logo SStv August 4, 2025
ಚೈತ್ರಾ ಕುಂದಾಪುರನ ಹೃದಯ ಸ್ಪರ್ಶಿಸಿದ ಸಿನಿಮಾ ‘ಸು ಫ್ರಮ್ ಸೋ’
ಚೈತ್ರಾ ಕುಂದಾಪುರನ ಹೃದಯ ಸ್ಪರ್ಶಿಸಿದ ಸಿನಿಮಾ ‘ಸು ಫ್ರಮ್ ಸೋ’

ಬಿಗ್ ಬಾಸ್ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ತಮ್ಮ ಪತಿ ಶ್ರೀಕಾಂತ್ ಜೊತೆ ‘ಸು ಫ್ರಮ್ ಸೋ’ ಚಿತ್ರವನ್ನು ನೋಡಿ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದಲ್ಲಿ ಕಣ್ಣಿನ ಗೆರೆಗಳಲ್ಲಿಯೇ ನಟನೆ ಮಾಡಿದ ರವಿ ಅಣ್ಣನ ಪಾತ್ರ, ಬಾವನ ನಗುನಗೆ ಕಥೆ, ನಳಿನಿ ಗಂಡನ ಹಾಸ್ಯವೊಂದರೊಳಗಿನ ಬದುಕಿನ ನೋವು ಇವೆಲ್ಲಾ ಚೈತ್ರಾಳ ಮನಸ್ಸಿನಲ್ಲಿ ಆಳವಾಗಿ ಮಿಂಚಿವೆ.

ಚಿತ್ರ ನೋಡಿ ಒಂದು ವಾರವಾದರೂ ಪಾತ್ರಗಳು ಅವರ ಮನಸ್ಸು ಬಿಡಲಿಲ್ಲವಂತೆ. "ನಮ್ಮ ನಿಜ ಬದುಕಿನ ಪಾತ್ರಗಳನ್ನೇ ತೆರೆಯ ಮೇಲೆ ನೋಡಿದ ಅನುಭವ" ಎಂದು ಅವರು ತಮ್ಮ ಭಾವನೆಗಳನ್ನು ಬರೆದುಕೊಂಡಿದ್ದಾರೆ. ವಿಶೇಷವಾಗಿ ಶನೀಲ್ ಗೌತಮ್ ಅಭಿನಯದ ರವಿಯಣ್ಣ ಮತ್ತು ರಾಜ್ ಬಿ ಶೆಟ್ಟಿ ಉಪಸ್ಥಿತಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗಿಸುತ್ತಲೇ ನೆನಪನ್ನು ಕೆದಕುವ ಈ ಸಿನಿಮಾ ಯಾವುದೇ ಗಿಮಿಕ್ಕುಗಳಿಲ್ಲದೆ, ಶುದ್ಧ ಮನರಂಜನೆಯ ರೂಪದಲ್ಲಿ ಪ್ರೇಕ್ಷಕರ ಮನ ಗೆದ್ದಿದೆ. ಚೈತ್ರಾ ಅವರ ಮಾತುಗಳಂತೆ, “ಇದು ಕನ್ನಡ ಚಿತ್ರರಂಗದ ಬದಲಾವಣೆಯ ಪರ್ವಕಾಲ!”