Back to Top

ಬಿಗ್​ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ವಿರುದ್ಧ ತೀವ್ರ ಗಲಾಟೆ

SSTV Profile Logo SStv December 6, 2024
ಚೈತ್ರಾ ಕುಂದಾಪುರ ವಿರುದ್ಧ ತೀವ್ರ ಗಲಾಟೆ
ಚೈತ್ರಾ ಕುಂದಾಪುರ ವಿರುದ್ಧ ತೀವ್ರ ಗಲಾಟೆ
ಬಿಗ್​ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ವಿರುದ್ಧ ತೀವ್ರ ಗಲಾಟೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11 11ನೇ ವಾರಕ್ಕೆ ಕಾಲಿಟ್ಟಿದೆ. ಇತ್ತೀಚಿನ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರ ವಿರುದ್ಧ ಮನೆಯ ಸ್ಪರ್ಧಿಗಳು ಒಮ್ಮತದಿಂದ ಕಳಪೆ ಪಟ್ಟ ನೀಡಿದ್ದು, ಗಲಾಟೆಗೆ ಕಾರಣವಾಗಿದೆ. ಕಳಪೆ ಪಟ್ಟಕ್ಕೆ ಕೋಪಗೊಂಡ ಚೈತ್ರಾ, "ನಾನು ನಿಮಗೆ ಇಸಿಯಾಗಿ ಟಾರ್ಗೆಟ್ ಆಗಿದ್ದೀನಿ ಅಲ್ವಾ?" ಎಂದು ಮನಸ್ಥಿತಿ ವ್ಯಕ್ತಪಡಿಸಿದರು. ಮಂಜಣ್ಣ ಮತ್ತು ಉಳಿದ ಸ್ಪರ್ಧಿಗಳ ಜತೆ ಚೈತ್ರಾ ತೀವ್ರ ವಾಗ್ವಾದ ನಡೆಸಿದ್ದು, ಈ ಗಲಾಟೆ ನಂತರ ಎರಡನೇ ಬಾರಿ ಅವರು ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿದ್ದಾಗ, ಚೈತ್ರಾ, ಮೋಕ್ಷಿತಾ, ಐಶ್ವರ್ಯಾ ಜೊತೆ ಮಂಜಣ್ಣ ಅವರ "ಕಣ್ ಸನ್ನೆ" ಕುರಿತು ಮಾತನಾಡಿದ್ರು, ಇದು ಮನೆಯ ಒಳ ರಾಜಕಾರಣಕ್ಕೆ ತೀವ್ರತೆ ನೀಡಿದೆ. ಬಿಗ್​ಬಾಸ್ ಅವರ ಮುಂದಿನ ಆದೇಶದವರೆಗೂ ಚೈತ್ರಾ ಜೈಲಿನಲ್ಲೇ ಇರಬೇಕಾಗಿದೆ. 11ನೇ ವಾರಕ್ಕೆ ಬಿಗ್​ಬಾಸ್ ಮನೆಯಲ್ಲಿ ಹೈ ಡ್ರಾಮಾ ಮುಂದುವರೆಯುವ ನಿರೀಕ್ಷೆ ಇದೆ.