Back to Top

ಚೈತ್ರಾ ಕುಂದಾಪುರ ಬಿಗ್ ಬಾಸ್ ಟಾಸ್ಕ್ ಆಡಲು ಆಗದೇ ಕಣ್ಣೀರು ಹಾಕಿದ ಕ್ಷಣ

SSTV Profile Logo SStv December 18, 2024
ಚೈತ್ರಾ ಕುಂದಾಪುರ ಟಾಸ್ಕ್ ಆಡಲು ಆಗದೇ ಕಣ್ಣೀರು ಹಾಕಿದ ಕ್ಷಣ
ಚೈತ್ರಾ ಕುಂದಾಪುರ ಟಾಸ್ಕ್ ಆಡಲು ಆಗದೇ ಕಣ್ಣೀರು ಹಾಕಿದ ಕ್ಷಣ
ಚೈತ್ರಾ ಕುಂದಾಪುರ ಬಿಗ್ ಬಾಸ್ ಟಾಸ್ಕ್ ಆಡಲು ಆಗದೇ ಕಣ್ಣೀರು ಹಾಕಿದ ಕ್ಷಣ ಬಿಗ್ ಬಾಸ್ ಕನ್ನಡ 11, 80ನೇ ದಿನಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳಲ್ಲಿ ತೀವ್ರ ಪೈಪೋಟಿ ಮುಂದುವರಿದಿದೆ. ಬಿಗ್ ಬಾಸ್ ನೀಡಿದ ಬಾಲ್ ಟಾಸ್ಕ್‌ನಲ್ಲಿ ಗೆಲ್ಲುವ ತಂಡ ನಾಮಿನೇಷನ್‌ನಿಂದ ಪಾರು ಆಗಲಿದ್ದು, ಟಾಸ್ಕ್ ಗೆಲ್ಲಲು ಎಲ್ಲಾ ಸ್ಪರ್ಧಿಗಳೂ ಶ್ರಮಿಸುತ್ತಿದ್ದಾರೆ. ಚೈತ್ರಾ ಕುಂದಾಪುರ ಅವರು ಈ ಟಾಸ್ಕ್ ಆಡಲು ಹೋರಾಟ ಮಾಡಿದರೂ, ಆಡುವಲ್ಲಿ ವಿಫಲರಾಗಿದ್ದಾರೆ. ಕಣ್ಣು ತುಂಬ ಕಣ್ಣೀರು ಹಾಕಿದ ಚೈತ್ರಾ, ನೈಜವಾಗಿ ಒತ್ತಡಕ್ಕೆ ಒಳಗಾದಂತೆ ಕಾಣಿಸಿದರು. ಕೋಲಿನಿಂದ ತಲೆಗೆ ಚಚ್ಚಿಕೊಳ್ಳುತ್ತಿದ್ದ ಚಿತ್ರಣ ಎಲ್ಲರಿಗೂ ನೋವಾಯಿತು. ಈ ಸಂದರ್ಭದಲ್ಲಿ ಚೈತ್ರಾ ಅವರ ತಂಡದ ಸದಸ್ಯರು ಅಸಹನೆ ವ್ಯಕ್ತಪಡಿಸಿದರು. ಇಂದಿನ ಸಂಚಿಕೆಯಲ್ಲಿ ಯಾವ ತಂಡ ಬಾಲ್ ಟಾಸ್ಕ್ ಗೆದ್ದಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಬಿಗ್ ಬಾಸ್ ಮನೆಯಲ್ಲಿ ಪೈಪೋಟಿ ದಿನೇ ದಿನೇ ತೀವ್ರಗೊಳ್ಳುತ್ತಿದೆ.