Back to Top

'ಬಿಗ್ ಬಾಸ್' ಖ್ಯಾತಿಯ ಶ್ರುತಿ ಪ್ರಕಾಶ್ ಎಲ್ಲಿ ಕಣ್ಮರೆಯಾದ್ರು? ಬಾಲಿವುಡ್ ಬ್ಯೂಟಿ ಈಗ ಕನ್ನಡದ ಕಡೆ ನೋಡುತ್ತಾ ಇದ್ದಾರೆ!

SSTV Profile Logo SStv July 25, 2025
ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಸುಂದರಿ ಶ್ರುತಿ ಪ್ರಕಾಶ್
ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಸುಂದರಿ ಶ್ರುತಿ ಪ್ರಕಾಶ್

'ಬಿಗ್ ಬಾಸ್' ಮೂಲಕ ಕನ್ನಡದ ಮನೆಮಾತಾದ ಶ್ರುತಿ ಪ್ರಕಾಶ್ ಇತ್ತೀಚೆಗೆ ಕನ್ನಡ ಚಿತ್ರರಂಗದಿಂದ ದೂರವಾದಂತೆ ಕಂಡುಬರುತ್ತಿದ್ದರೂ, ಅವರು ಬಾಲಿವುಡ್‌ನಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಬಿಡುತ್ತಿದ್ದಾರೆ. ಸದ್ಯ ಅವರು ‘ಸಜ್ರ್ಯಾ’ ಎಂಬ ಕಲಾತ್ಮಕ ಹಿಂದಿ ಸಿನಿಮಾದಲ್ಲಿ ಮರಾಠಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕಳೆದ ವರ್ಷ ಲಿಗಮೆಂಟ್ ಟಿಯರ್ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ಶ್ರುತಿ, ಬೇಗನೇ ಚೇತರಿಸಿಕೊಂಡು ಮತ್ತೆ ಶೂಟಿಂಗ್‌ಗೆ ಹಾಜರಾದರು. ಕನ್ನಡದಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಸ್ಪಷ್ಟನೆ ನೀಡಿದ ಶ್ರುತಿ, “ನನಗೆ ಕನ್ನಡದಿಂದ ಅವಕಾಶಗಳು ಬರುತ್ತಿಲ್ಲ. ನಾನು ಬಾಲಿವುಡ್‌ಗೆ ಹೋಗಿದ್ದೆ ಎಂದು ಕನ್ನಡದಲ್ಲಿ ಮರೆತುಹೋಗಿದ್ದಾರೆ ಅನಿಸಬಹುದು. ಆದರೂ ನನ್ನ ಮೊದಲ ಆದ್ಯತೆ ಕನ್ನಡವೇ” ಎಂದಿದ್ದಾರೆ.

ಸೀರಿಯಲ್‌ಗಳಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲದ ಶ್ರುತಿ, ಈಗ ಹಾಂಟೆಡ್-2 (ಸೆಪ್ಟೆಂಬರ್ 26ಕ್ಕೆ ರಿಲೀಸ್), ಬಾರಾತ್, ಮತ್ತು ಇಂಗ್ಲಿಷ್ ಸಿನಿಮಾ ಸೇರಿದಂತೆ ಹಲವು ಯೋಜನೆಗಳಲ್ಲಿ ನಿರತರಾಗಿದ್ದಾರೆ. ಅವರು ತಮ್ಮ ಅಭಿನಯದ ಮೂಲಕ ಕನ್ನಡಕ್ಕೆ ಮರಳಿ ಬರುವ ದಿನಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.