Back to Top

ಬಿಂದಾಸ್ ಬ್ಯೂಟಿ ಹನ್ಸಿಕಾ ದಾಂಪತ್ಯದಲ್ಲಿ ಬಿರುಕು? ವಿಚ್ಛೇದನದ ವದಂತಿ ಹಬ್ಬುತ್ತಿದೆ!

SSTV Profile Logo SStv July 22, 2025
ಬಿಂದಾಸ್ ಬ್ಯೂಟಿ ಹನ್ಸಿಕಾ ದಾಂಪತ್ಯದಲ್ಲಿ ಬಿರುಕು
ಬಿಂದಾಸ್ ಬ್ಯೂಟಿ ಹನ್ಸಿಕಾ ದಾಂಪತ್ಯದಲ್ಲಿ ಬಿರುಕು

ಸಂದರ್ಭದ ಸುಂದರಿ ನಟಿ ಹನ್ಸಿಕಾ ಮೊಟ್ವಾಣಿ ಅವರ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೂರು ವರ್ಷಗಳ ಹಿಂದೆ, 2022ರ ಡಿಸೆಂಬರ್‌ 4ರಂದು ರಾಜಸ್ಥಾನದ ಜೈಪುರದ ಮುಂಡೋಟಾ ಕೋಟೆಯಲ್ಲಿ ಸೊಹೇಲ್ ಖಾನ್ ಅವರನ್ನು ಅದ್ಧೂರಿಯಾಗಿ ಮದುವೆಯಾದ ಹನ್ಸಿಕಾ, ಇತ್ತೀಚೆಗೆ ಪತಿಯ ಜೊತೆಗೆ ಯಾವುದೇ ಫೋಟೋಗಳನ್ನು ಹಂಚಿಕೊಳ್ಳದೆ, ಅನುಮಾನಗಳಿಗೆ ಆಮಿಷವಾಗಿದ್ದಾರೆ.

ಹನ್ಸಿಕಾಗೆ ಹಿಂದಿನ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೋಸ್ಟ್ ಮಾಡಿದ್ದ ದೃಷ್ಟಾಂತ ಇದ್ದರೂ, ಈ ಬಾರಿ ಯಾವುದೇ ವಿಶೇಷ ಪೋಸ್ಟ್ ಇಲ್ಲದಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ವರದಿಗಳ ಪ್ರಕಾರ, ಹನ್ಸಿಕಾ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದರೆ, ಅವರ ಪತಿ ತಮ್ಮ ಹೆತ್ತವರ ಜತೆ ಇರುವಂತೆ ಹೇಳಲಾಗುತ್ತಿದೆ.

ಆರಂಭದಲ್ಲಿ ಈ ಜೋಡಿ ಸಾಕಷ್ಟು ಟ್ರಾವೆಲ್‌ಗೂ ಹೋಗಿ ತಮ್ಮ ಪ್ರೀತಿಯನ್ನು ಬಹಿರಂಗಪಡಿಸುತ್ತಿದ್ದರೂ, ಇದೀಗ ಇಬ್ಬರೂ ಪ್ರತ್ಯೇಕ ವಾಸವಲ್ಲಿದ್ದಾರಾ ಎಂಬ ಪ್ರಶ್ನೆಗಳು ಕಾಡುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಬದಲಾವಣೆ ಕಂಡುಬರುತ್ತಿದ್ದು, ವಿಚ್ಛೇದನದ ಸುದ್ದಿ ಕೇವಲ ವದಂತಿಯೇ ಅಥವಾ ಸತ್ಯವೇ ಎಂಬುದು ಸ್ಪಷ್ಟವಾಗಿಲ್ಲ.

ಸದ್ಯ ಈ ಬಗ್ಗೆ ಹನ್ಸಿಕಾಗಲಿ, ಅವರ ಪತಿಯಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಭಿಮಾನಿಗಳು ಮಾತ್ರ ಈ ಕುರಿತಂತೆ ನಿಖರ ಸ್ಪಷ್ಟತೆಗಾಗಿ ಕಾಯುತ್ತಿದ್ದಾರೆ.