Back to Top

‘ಮನೆ ಬಾಡಿಗೆ ಏರಿದಂತೆ’ – ಬಿಗ್ ಬಾಸ್ ಸಂಭಾವನೆ ಕುರಿತು ಸುದೀಪ್ ನೇರ ಮಾತು!

SSTV Profile Logo SStv July 1, 2025
ಬಿಗ್ ಬಾಸ್ ಸಂಭಾವನೆ ಕುರಿತು ಸುದೀಪ್ ನೇರ ಮಾತು!
ಬಿಗ್ ಬಾಸ್ ಸಂಭಾವನೆ ಕುರಿತು ಸುದೀಪ್ ನೇರ ಮಾತು!

ಕನ್ನಡದ ಬೃಹತ್ ರಿಯಾಲಿಟಿ ಶೋ ಬಿಗ್ ಬಾಸ್ ನಿರೂಪಕರಾಗಿ ಸುದೀರ್ಘ ಕಾಲದಿಂದ ಮಾದರಿಯಾಗಿರುವ ಕಿಚ್ಚ ಸುದೀಪ್, ಈ ಬಾರಿ ತಮ್ಮ ಸಂಭಾವನೆ ಕುರಿತ ಪ್ರಶ್ನೆಗಳಿಗೆ ಸೊಗಸಾಗಿ ಆದರೆ ನೇರವಾಗಿ ಉತ್ತರ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 12 ಘೋಷಣೆಯ ಸುದ್ದಿಗೋಷ್ಠಿಯಲ್ಲಿ, ಅವರ ಸಂಭಾವನೆ ಕುರಿತ ಪ್ರಶ್ನೆ ಕೇಳಲ್ಪಟ್ಟಾಗ, ಅವರು "ಮನೆ ಬಾಡಿಗೆ ಏರಿದಂತೆ…!" ಎಂಬ ಹೋಲಿಕೆಯನ್ನು ನೀಡಿದರು.

"ನಾನು ಲೀಸ್‌ಗೆ ಇಲ್ಲ, ರೆಂಟ್‌ಗೂ ಇಲ್ಲ. ನಮ್ಮದೊಂದು ಸಂಬಂಧ ಇದೆ," ಎಂದು ಹೇಳಿದ ಸುದೀಪ್, ತಮ್ಮ ಬಿಗ್ ಬಾಸ್ ಪ್ರಯಾಣವನ್ನೂ ಪ್ರೀತಿ ಹಾಗೂ ಗೌರವದಿಂದಲೇ ಮುಂದುವರೆಸುತ್ತಿರುವುದನ್ನು ಒತ್ತಿ ಹೇಳಿದರು. ಸಂಭಾವನೆಯ ಬಗ್ಗೆ ಪ್ರಶ್ನೆ ನೇರವಾಗಿದ್ದರೂ, ಅವರು ಜಾಣತನದಿಂದ ಬದ್ಧ ಉತ್ತರ ನೀಡಿ ಎಲ್ಲರ ಮೆಚ್ಚುಗೆಗೂ ಪಾತ್ರರಾದರು.

ಅವರು ಮುಂದುವರೆದು, “ಪ್ರತಿ ಶೋನಿಗೂ ಬಜೆಟ್ ಇರುತ್ತೆ, ಸ್ಪರ್ಧಿಗಳಿಗೂ ಸಂಭಾವನೆ ಕೊಡಬೇಕು. ನಾನು ಯಾವಾಗಲೂ ಹಣವನ್ನು ಮೊದಲದಾಗಿ ನೋಡಲ್ಲ. ಸಂಭಾವನೆ ಅಂತಾ ಪಬ್ಲಿಕ್‌ನಲ್ಲಿ ಮಾತನಾಡೋ ವಿಷಯವೂ ಅಲ್ಲ” ಎಂದು ಸ್ಪಷ್ಟಪಡಿಸಿದರು.

ಸುದೀಪ್ ಮೊದಲಿಗೆ ಬಿಗ್ ಬಾಸ್ ನಿರೂಪಣೆ ಮಾಡಲ್ಲವೆಂದು ಟ್ವೀಟ್ ಮಾಡಿದ್ದರೂ, ನಂತರ ಮನಸ್ಸು ಬದಲಿಸಿಕೊಂಡು ಸೀಸನ್ 12ಗೆ ಸಹಿ ಹಾಕಿದ್ರು. ಈ ಬದಲಾವಣೆ ಹಿಂದೆಯಾದ ಕಾರಣವಾಗಿ ಅವರು ಕನ್ನಡ ಭಾಷೆಗೆ ಶೋನಲ್ಲಿ ಹೆಚ್ಚಿನ ಒತ್ತು ಕೊಡಬೇಕು ಎಂಬ ದೃಢ ನಿಲುವುನ್ನು ಮುಂದಿಟ್ಟಿದ್ದಾರೆ.

“ನಾನು ರೇಟ್ ಕಟ್ಟೋದು ಇಲ್ಲ. ನಾನು ಚೀಪ್ ಅಲ್ಲ. ಸಿನಿಮಾ ದೊಡ್ಡದಾದಾಗ, ನಾವು ಹೊಂದಾಣಿಕೆ ಮಾಡಬೇಕು. ಮೊದಲಿ ಪಡೆದ ಸಂಭಾವನೆ ಈಗಲೂ ಪ್ಲಾನ ಮಾಡೋಕೆ ಆಗಲ್ಲ. ಇದು ಸಹಜ ಪ್ರಕ್ರಿಯೆ” ಎಂದು  ಉತ್ತರಿಸಿದ್ದಾರೆ.