ಬಿಗ್ ಬಾಸ್ 12 ಮಾತ್ರವಲ್ಲ – 15ನೇ ಸೀಸನ್‌ವರೆಗೂ ಕಿಚ್ಚ ಸುದೀಪ್ ಹೋಸ್ಟ್! ಅಭಿಮಾನಿಗಳಿಗೆ ಡಬಲ್ ಧಮಾಕಾ


ಕನ್ನಡದ ಬೃಹತ್ ರಿಯಾಲಿಟಿ ಶೋ ಬಿಗ್ ಬಾಸ್ ಅಭಿಮಾನಿಗಳಿಗೆ ಈಗ ಡಬಲ್ ಖುಷಿಯ ಸಮಯ. ಸೀಸನ್ 12 ನಿರೂಪಣೆಗೆ ಕಿಚ್ಚ ಸುದೀಪ್ ವಾಪಸ್ ಆಗಿರುವುದು ಸ್ಪಷ್ಟವಾಗಿದ್ದು, ಇದರಿಂದ ಅಭಿಮಾನಿಗಳ ನಿರೀಕ್ಷೆಗೂ ಖಚಿತವಾಗಿದೆ. ಆದರೆ, ಅದಕ್ಕೂ ಮಿಗಿಲಾಗಿ ಸುದೀಪ್ ನೀಡಿದ ಮತ್ತೊಂದು ಘೋಷಣೆಯು ಸ್ಫೋಟದಂತಾಗಿದೆ ಅವರು ಕೇವಲ ಸೀಸನ್ 12 ಮಾತ್ರವಲ್ಲ, ಮುಂದಿನ ನಾಲ್ಕು ಸೀಸನ್‌ಗಳಿಗೆ ಸಹಿ ಹಾಕಿದ್ದಾರೆ!
ಇಂದು ಕಲರ್ಸ್ ಕನ್ನಡ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಮಾತನಾಡುತ್ತಾ, “ನಾನು 12ನೇ ಸೀಸನ್‌ಗೆ ಮಾತ್ರ ಸೈನ್ ಮಾಡಿಲ್ಲ. ನಾನು 15ನೇ ಸೀಸನ್‌ವರೆಗೂ ನಿರೂಪಣೆ ಮಾಡ್ತೀನಿ” ಎಂದು ಖುದ್ದಾಗಿ ಘೋಷಿಸಿದರು. ಈ ಮೂಲಕ ಮುಂದಿನ ಮೂರು ವರ್ಷಗಳ ಬಿಗ್ ಬಾಸ್ ವೈಭೋಗವೂ ಕಿಚ್ಚ ಕೈಯಲ್ಲಿಯೇ ಇರುವುದಾಗಿ ಖಚಿತವಾಗಿದೆ.
ಈ ಘೋಷಣೆಯ ನಂತರ ಮಾಧ್ಯಮದವರು ಕೇಳಿದ “ಇನ್ನು ಬಿಗ್ ಬಾಸ್ ಮಾಡೋಕೆ ಒಪ್ಪಿಕೊಂಡಿರೋದು ಏಕೆ?” ಎಂಬ ಪ್ರಶ್ನೆಗೆ ಸುದೀಪ್ ಸ್ಪಷ್ಟವಾಗಿ ಉತ್ತರಿಸಿ, “ಜನರಿಂದ ಬಂದ ಪ್ರೀತಿ, ಸ್ನೇಹಿತರಿಂದ ಒತ್ತಾಸೆ, ಹಾಗೂ ಕಲರ್ಸ್ ವಾಹಿನಿಯ ಸುಷ್ಮಾ ಮ್ಯಾಮ್ ಶ್ರಮವೇ ನನಗೆ ವಾಪಸ್ ಕಾರಣ” ಎಂದು ಹೃದಯಭರಿತ ಉತ್ತರ ನೀಡಿದರು. ಸುದೀಪ್ ಸ್ಪಷ್ಟನೆ: “ನಾನು ಸ್ಪರ್ಧಿಗಳ ಆಯ್ಕೆ ಮಾಡುವವನು ಅಲ್ಲ. ನಾನಾಗಿರುವುದು ನಿಷ್ಠೆ, ಸತ್ಯತೆಯ ಪ್ರತಿನಿಧಿ. ಬಿಗ್ ಬಾಸ್ ವೇದಿಕೆಯಲ್ಲಿ ಯಾರು ಬಂದರೂ ನೇರವಾಗಿ ಮಾತನಾಡುತ್ತೇನೆ.”
ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಕುಟ್ಟಿ ಅವರು ವೇದಿಕೆಯಲ್ಲಿ ಸ್ವತಃ ಘೋಷಿಸಿದಂತೆ, ಮುಂದಿನ ಸೀಸನ್‌ಗಳಲ್ಲೂ ಸುದೀಪ್ ನಿರೂಪಕರಾಗಿರುವುದು ಬಿಗ್ ಬಾಸ್ ಫ್ಯಾನ್ಸ್‌ಗಾಗಿ ದೊಡ್ಡ ಗಿಫ್ಟ್ ಆಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
