ಅಶ್ಲೀಲ ಮಾತು ಕೇಳಲಾಗದೇ ಬಿಗ್ ಬಾಸ್ನಿಂದ ಹೊರಗೆ ಬರಲು ಸುರೇಶ್ ನಿರ್ಧಾರ


ಅಶ್ಲೀಲ ಮಾತು ಕೇಳಲಾಗದೇ ಬಿಗ್ ಬಾಸ್ನಿಂದ ಹೊರಗೆ ಬರಲು ಸುರೇಶ್ ನಿರ್ಧಾರ ‘ಬಿಗ್ ಬಾಸ್ ಕನ್ನಡ 11’ ಮನೆಯಲ್ಲಿ ಮತ್ತೊಂದು ವಿವಾದ ಎದ್ದುಕೊಂಡಿದ್ದು, ಸ್ಪರ್ಧಿ ಗೋಲ್ಡ್ ಸುರೇಶ್ ತಮ್ಮ ಗೌರವಕ್ಕೆ ಧಕ್ಕೆ ತರುವ ಅಶ್ಲೀಲ ಮಾತುಗಳ ಕಾರಣ ಮನೆಯಿಂದ ಹೊರಟು ಹೋಗಲು ತೀರ್ಮಾನಿಸಿದರು. ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಬಳಕೆ ಮಾಡಿದ ಅವಾಚ್ಯ ಪದಗಳು ಸುರೇಶ್ ಅವರನ್ನು ನೋಯಿಸಿದ್ದು, ಈ ವಿಷಯವನ್ನು ಬಿಗ್ ಬಾಸ್ ಮುಂದೆ ಅವರು ಪ್ರಸ್ತಾಪಿಸಿದರು.
ಟಾಸ್ಕ್ ಸಂದರ್ಭ ಇಬ್ಬರ ನಡುವಿನ ಕಿರಿಕ್ ತಾರಕಕ್ಕೇರಿದಾಗ, ರಜತ್ ಗಡಿ ಮೀರಿ ಅವಾಚ್ಯ ಪದಗಳನ್ನು ಬಳಸಿದ ವಿಚಾರ ಸುರೇಶ್ ಅವರಿಗೆ ತೀವ್ರ ಅಸಹ್ಯವಾಯಿತು. "ಇಂಥ ಮಾತುಗಳನ್ನು ಕೇಳಲು ನಾನು ಇಲ್ಲಿಗೆ ಬಂದಿಲ್ಲ" ಎಂದು ಹೇಳಿ, ಮನೆಯಿಂದ ಹೊರಟು ಹೋಗಲು ಬಾಗಿಲು ತೆಗೆಯುವಂತೆ ಅವರು ಹಠ ಮಾಡಿದರು.
ಬಿಗ್ ಬಾಸ್ ಮನೆಯ ಇತರ ಸದಸ್ಯರು ಅವರನ್ನು ಸಮಾಧಾನ ಪಡಿಸಿ, ಆಟದಲ್ಲಿ ಮುಂದುವರೆಯಲು ಪ್ರೇರೇಪಿಸಿದರು. "ಆಟದ ಮೂಲಕವೇ ಉತ್ತರ ನೀಡಿ" ಎಂದು ತ್ರಿವಿಕ್ರಮ್ ಸಲಹೆ ನೀಡಿದರು. ಕೊನೆಗೆ, ಇತರರ ಮಾತು ಕೇಳಿ, ಸುರೇಶ್ ಮನೆಯಲ್ಲಿ ಉಳಿಯಲು ಸಮ್ಮತಿಸಿದರು.
ಈ ಘಟನೆಯಿಂದ ಮನೆಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಸುರೇಶ್ ಅವರ ಆಟ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
