Back to Top

ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರ ಬಂದ ಗೋಲ್ಡ್ ಸುರೇಶ್

SSTV Profile Logo SStv December 16, 2024
ಬಿಗ್ ಬಾಸ್ ಮನೆಯಿಂದ ಹೊರ ಬಂದ ಗೋಲ್ಡ್ ಸುರೇಶ್
ಬಿಗ್ ಬಾಸ್ ಮನೆಯಿಂದ ಹೊರ ಬಂದ ಗೋಲ್ಡ್ ಸುರೇಶ್
ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರ ಬಂದ ಗೋಲ್ಡ್ ಸುರೇಶ್ ಬಿಗ್ ಬಾಸ್ ಸೀಸನ್ 11ರಲ್ಲಿ ಇಂದು ಅತಿದೊಡ್ಡ ಬೆಳವಣಿಗೆಯೊಂದು ಸಂಭವಿಸಿದೆ. ಮನೆಯಲ್ಲಿ ಎಲ್ಲರ ಮನ ಗೆದ್ದು ಕ್ಯಾಪ್ಟನ್ ಸ್ಥಾನದಲ್ಲಿದ್ದ ಗೋಲ್ಡ್ ಸುರೇಶ್ ಅವರು ದಿಢೀರ್ ಮನೆಯಿಂದ ಹೊರ ನಡಿದಿದ್ದಾರೆ. ಬಿಗ್ ಬಾಸ್ ಈ ಬಗ್ಗೆ ತಿಳಿಸಿ, ಗೋಲ್ಡ್ ಸುರೇಶ್ ಅವರ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಘೋಷಿಸಿದರು. ಕುಟುಂಬದ ಅವಶ್ಯಕತೆಯನ್ನು ಪ್ರಾಮುಖ್ಯವಾಗಿ ಪರಿಗಣಿಸಿ, ಬಿಗ್ ಬಾಸ್ ಅವರು ಕೂಡಲೇ ಮನೆಯಿಂದ ಹೊರಡಲು ಸೂಚಿಸಿದರು. ಈ ಸುದ್ದಿ ಕೇಳಿ ಮನೆಯ ಸದಸ್ಯರೆಲ್ಲರೂ ಭಾವುಕರಾದರು. ಗೋಲ್ಡ್ ಸುರೇಶ್ ಮನೆಯಿಂದ ಹೊರಡುವಾಗ, "ನಾನು ಹೇಗೆ ಬಂದನೋ ಹಾಗೆಯೇ ಹೋಗ್ತೀನಿ" ಎಂದು ಹೇಳಿದ್ದು, ಎಲ್ಲರ ಕಣ್ಣು ತೊಡಿಸಿದರು. ಮನೆಗೆ ಮರಳುವಂತೆ ಸದಸ್ಯರು ಆಶಿಸುತ್ತಾ, ದೇವರು ಒಳ್ಳೆಯದನ್ನು ಮಾಡಲಿ ಎಂದು ಅವರಿಗೆ ಶುಭ ಹಾರೈಸಿದರು. ಈ ಘಟನೆ ಬಿಗ್ ಬಾಸ್ ಸೀಸನ್ 11ರಲ್ಲಿ ಅತಿದೊಡ್ಡ ಅಚ್ಚರಿಯ ಬೆಳವಣಿಗೆಯಾಗಿ ಜನರ ಗಮನ ಸೆಳೆದಿದೆ.