Back to Top

ಬಿಗ್ ಬಾಸ್ ಮನೆಯಲ್ಲಿ ‘ಮ್ಯಾಕ್ಸ್’ ಟೀಸರ್ ಪ್ರದರ್ಶನ ಮಂಜುಗೆ ವಿಶೇಷ ಕ್ಷಣ

SSTV Profile Logo SStv December 9, 2024
ಬಿಗ್ ಬಾಸ್ ಮನೆಯಲ್ಲಿ ‘ಮ್ಯಾಕ್ಸ್’ ಟೀಸರ್
ಬಿಗ್ ಬಾಸ್ ಮನೆಯಲ್ಲಿ ‘ಮ್ಯಾಕ್ಸ್’ ಟೀಸರ್
ಬಿಗ್ ಬಾಸ್ ಮನೆಯಲ್ಲಿ ‘ಮ್ಯಾಕ್ಸ್’ ಟೀಸರ್ ಪ್ರದರ್ಶನ ಮಂಜುಗೆ ವಿಶೇಷ ಕ್ಷಣ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಟೀಸರ್ ಬಿಗ್ ಬಾಸ್ ಮನೆಗೆ ವಿಶೇಷ ಸರ್ಪ್ರೈಸ್ ಆಗಿ ಬಂದಿದೆ. ಡಿಸೆಂಬರ್ 8ರ ಎಪಿಸೋಡ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಟೀಸರ್ ಪ್ರದರ್ಶನಗೊಂಡಿದ್ದು, ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಉಗ್ರಂ ಮಂಜು ಹೆಚ್ಚು ಸಂತೋಷಗೊಂಡರು. ಸುದೀಪ್ ಮತ್ತು ಮಂಜು ಅಭಿನಯದ ಈ ಟೀಸರ್ ನೋಡಿ, ಮನೆಯ ಸದಸ್ಯರು ಚಪ್ಪಾಳೆ ಹೊಡೆಯುತ್ತಾ ಚಿತ್ರವನ್ನು ಮತ್ತೊಮ್ಮೆ ಪ್ರದರ್ಶಿಸಲು ಮನವಿ ಮಾಡಿದರು. ಬಿಗ್ ಬಾಸ್ ಸಂಚಿಕೆಯಲ್ಲಿ, ಡಿಸೆಂಬರ್ 25ರಂದು ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಘೋಷಿಸಿ, ಸುದೀಪ್ ಮತ್ತು ಮಂಜುಗೆ ಶುಭಾಶಯ ಕೋರಲಾಯಿತು. ‘ಮ್ಯಾಕ್ಸ್’ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದು, ಕಲೈ ಪುಲಿ ಎಸ್. ಧಾನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ದೃಶ್ಯಗಳು ತಮಿಳುನಾಡಿನಲ್ಲಿ ಶೂಟ್ ಆಗಿದ್ದು, ಒಂದು ರಾತ್ರಿಯ ಕಥಾಹಂದರವನ್ನು ಹೊಂದಿದೆ. ಸುದೀಪ್ ಅವರ ಮಾಸ್ ಆ್ಯಕ್ಷನ್ ದೃಶ್ಯಗಳು ಮತ್ತು ಉಗ್ರಂ ಮಂಜು ಅವರ ವೈಲನ್ ಝಲಕ್ ಟೀಸರ್‌ನ ವಿಶೇಷ ಆಕರ್ಷಣೆಯಾಗಿವೆ. ಬಿಗ್ ಬಾಸ್ ಮನೆಗೆ ಬಂದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ ಈ ಟೀಸರ್, ವರ್ಷಾಂತ್ಯಕ್ಕೆ ಅಭಿಮಾನಿಗಳಿಗೆ ಭರ್ಜರಿ ಚಿತ್ರವನ್ನು ತರುತ್ತದೆ ಎಂಬ ನಿರೀಕ್ಷೆ ಮೂಡಿಸಿದೆ.