Back to Top

ಬಿಗ್​ಬಾಸ್ ಮನೆಯಲ್ಲಿ ಮಂಜು ಸಾಮ್ರಾಜ್ಯದ ರಾಜ ಧನರಾಜ್ ರೊಚ್ಚಿಗೆದ್ದ ದೃಶ್ಯ

SSTV Profile Logo SStv November 25, 2024
ಬಿಗ್​ಬಾಸ್ ಮನೆಯಲ್ಲಿ ಮಂಜು ಸಾಮ್ರಾಜ್ಯ
ಬಿಗ್​ಬಾಸ್ ಮನೆಯಲ್ಲಿ ಮಂಜು ಸಾಮ್ರಾಜ್ಯ
ಬಿಗ್​ಬಾಸ್ ಮನೆಯಲ್ಲಿ ಮಂಜು ಸಾಮ್ರಾಜ್ಯದ ರಾಜ ಧನರಾಜ್ ರೊಚ್ಚಿಗೆದ್ದ ದೃಶ್ಯ ಬಿಗ್​ಬಾಸ್ ಮನೆ ಈ ವಾರ ಸಾಮ್ರಾಜ್ಯವಾಗಿ ಬದಲಾಗಿದ್ದು, ಕ್ಯಾಪ್ಟನ್ ಮಂಜು ರಾಜನಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ಉಗ್ರಾವತಾರದ ದರ್ಬಾರ್ ಆರಂಭವಾಗಿದ್ದು, ಪ್ರಜೆಗಳಾದ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಸಾಮ್ರಾಜ್ಯದ ನಿಯಮ ಪಾಲಿಸದ ಚೈತ್ರಾ ಕುಂದಾಪುರ ಅವರ ಬಾಯಿಗೆ ಆಲೂಗಡ್ಡೆ ಹಾಕುವಂತೆ ಮಂಜು ಆದೇಶಿಸಿದ್ದು, ಇನ್ನೂ ಕೆಲವರಿಗೆ 50ಕ್ಕೂ ಹೆಚ್ಚು ಬಸ್ಕಿಗಳನ್ನು ತೆಗೆಸಿದ್ದಾರೆ. ಈ ಕಠಿಣ ಶಿಕ್ಷೆಗಳು ಮನೆ ಸದಸ್ಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದಕ್ಕೂ ಮುನ್ನ, ಧನರಾಜ್ ರಾಜನ ನಡತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಹನುಮಂತನ ಬಳಿ ತನ್ನ ಅಸಹನೆ ಹಂಚಿಕೊಂಡಿದ್ದಾರೆ. ಈ ಸಂಜೆ ಪ್ರಸಾರವಾಗಲಿರುವ ಎಪಿಸೋಡ್‌ನಲ್ಲಿ, ಮಂಜು ಸಾಮ್ರಾಜ್ಯದ ಆಡಳಿತದ ಬಿಗ್‌ ಡ್ರಾಮಾ ವೀಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ. ಬಿಗ್​ಬಾಸ್ 11 ಈ ವಾರ ಸಖತ್‌ ಚಟಾಕಿ ಕತೆಯಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ.