Back to Top

ಬಿಗ್​ಬಾಸ್ ಮನೆಯಲ್ಲಿ ಬುರುಡೆ ಒಡೆಯುವ ಮಾತು ಮಂಜು-ರಜತ್ ಮಧ್ಯೆ ಆಗಿದ್ದೇನು

SSTV Profile Logo SStv November 28, 2024
ಬಿಗ್​ಬಾಸ್ ಮನೆಯಲ್ಲಿ ಬುರುಡೆ ಒಡೆಯುವ ಮಾತು
ಬಿಗ್​ಬಾಸ್ ಮನೆಯಲ್ಲಿ ಬುರುಡೆ ಒಡೆಯುವ ಮಾತು
ಬಿಗ್​ಬಾಸ್ ಮನೆಯಲ್ಲಿ ಬುರುಡೆ ಒಡೆಯುವ ಮಾತು ಮಂಜು-ರಜತ್ ಮಧ್ಯೆ ಆಗಿದ್ದೇನು ಬಿಗ್‌ಬಾಸ್ ಕನ್ನಡ ಸೀಸನ್ 11 ಮನೆಯಲ್ಲಿ ಟಾಸ್ಕ್‌ ವೇಳೆ ಮತ್ತೊಮ್ಮೆ ತೀವ್ರ ಗಲಾಟೆ ನಡೆದಿದೆ. ಕ್ಯಾಪ್ಟನ್ ಮಂಜು ಮತ್ತು ರಜತ್ ನಡುವೆ ಮಾತಿನ ಸಮರ ಎದ್ದು, ಟಾಸ್ಕ್‌ ಕಸರತ್ತಿನ ಸಮಯದಲ್ಲಿ ಬಣಗಳ ನಡುವೆ ತಳ್ಳಾಟ ನಡೆದಿದೆ. ಮೋಕ್ಷಿತಾ ಬಣದ ರಜತ್‌ ಮೇಲೆ ಕೋಪಗೊಂಡ ಮಂಜು, "ಬುರುಡೆ ಒಡಿತಿಯಾ ನೀನು?" ಎಂದು ಪ್ರಶ್ನಿಸಿದ್ದು, ರಜತ್‌ "ನೀನು ಯಾರು ರೌಡಿ ಎಂದು ಕರೆಯಲು?" ಎಂದು ಕಿರಿಚಿದ್ದಾರೆ. ಈ ಗಲಾಟೆಯ ನಡುವೆ, ಮಂಜು ತಮ್ಮ ಶೈಲಿಯಲ್ಲಿ ಸವಾಲು ಹಾಕಿ, "ನಿನ್ನಾಟ ನೀನು ತೋರಿಸು, ನನ್ನಾಟ ನಾನು ತೋರಿಸ್ತೇನೆ" ಎಂದು ಕೌಂಟರ್ ಕೊಟ್ಟಿದ್ದಾರೆ. ಪ್ರತಿಸ್ಪರ್ಧಿಗಳ ನಡುವಿನ ಈ ತೀವ್ರತೆ ಎರಡೂ ಬಣಗಳ ನಡುವೆ ಮುಂದಿನ ಟಾಸ್ಕ್‌ಗಳಲ್ಲಿ ಗುದ್ದಾಟಕ್ಕೆ ಕಾರಣವಾಗಲಿದೆ ಎಂಬುದು ಸ್ಪಷ್ಟ.